ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅಭಿನಯದ ಕೊನೆಯ ಸಿನಿಮಾ ‘ಜನ ನಾಯಗನ್’ ಜುಲೈ 23 ರಂದು ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಲಿದೆ.
ಕೆವಿಎನ್ ಪ್ರೊಡಕ್ಷನ್ಸ್ ಬುಧವಾರ ‘ಎಕ್ಸ್’ ನಲ್ಲಿ ‘ಜನನಾಯಗನ್’ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಈ ಮೂಲಕ ಅಭಿಮಾನಿಗಳ ಕಾಯುವಿಕೆಗೆ ಚಿತ್ರತಂಡ ಅಧಿಕೃತವಾಗಿ ತೆರೆ ಎಳೆದಿದೆ.
“ಬೆಂಕಿಯಿಂದ ಪರೀಕ್ಷಿಸಲ್ಪಟ್ಟಿದೆ. ಕಾಲದಿಂದ ರೂಪಿಸಲ್ಪಟ್ಟಿದೆ. ಇತಿಹಾಸಕ್ಕಾಗಿ ನಿರ್ಮಿಸಲಾಗಿದೆ. ಯುದ್ಧ ಕಠಿಣವಾದಷ್ಟೂ ಗೆಲುವು ಜೋರಾಗಿರುತ್ತದೆ. #JanaNayaganFromJuly23, #JanaNayakuduFromJuly23 ಮತ್ತು #JanNetaFromJuly23” ಎಂದು ಕೆವಿಎನ್ ಪ್ರೊಡಕ್ಷನ್ಸ್ ಪೋಸ್ಟ್ ಮಾಡಿದೆ.
ಜನ ನಾಯಗನ್’ ಚಿತ್ರಕ್ಕೆ ಇತ್ತೀಚೆಗೆ “ಎ” ಪ್ರಮಾಣಪತ್ರ ನೀಡಲಾಗಿತ್ತು. ಚಿತ್ರವನ್ನು ಖ್ಯಾತ ನಿರ್ದೇಶಕ ಎಚ್.ವಿನೋತ್ ನಿರ್ದೇಶಿಸಿದ್ದು, ಆ್ಯಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್, ಟೀಸರ್ ಮತ್ತು ಹಾಡುಗಳು ಸಿನಿಪ್ರಿಯರ ಗಮನ ಸೆಳೆದಿವೆ.
ಚಿತ್ರದಲ್ಲಿ ವಿಜಯ್‌ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದಾರೆ. ಬಾಲಿವುಡ್ ನಟ ಬಾಬಿ ಡಿಯೋಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ಮಮಿತಾ ಬೈಜು ಸೇರಿದಂತೆ ಹಲವು ಖ್ಯಾತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
—–





Be the first to comment