ಸೈನಿಕ-2 ಟೀಸರ್ ಬಿಡುಗಡೆ

ಕಾಂಗ್ರೆಸ್ ಶಾಸಕ, ನಟ  ಸಿ.ಪಿ. ಯೋಗೇಶ್ವರ್ ಅವರ ಪುತ್ರ ಧ್ಯಾನ್ ಯೋಗೇಶ್ವರ್ ಅವರ ಚೊಚ್ಚಲ ಸಿನಿಮಾ ‘ಸೈನಿಕ 2’  ಟೀಸರ್  ಬಿಡುಗಡೆಯಾಗಿದೆ.

ಈ ಚಿತ್ರದಲ್ಲಿ ಸಿ. ಪಿ. ಯೋಗೇಶ್ವರ್  ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಿ.ಪಿ. ಯೋಗೇಶ್ವರ್ ತಮ್ಮ ಸಾಮಾಜಿಕ ಮಾಧ್ಯಮ ಇನ್ ಸ್ಟಾಗ್ರಾಂನಲ್ಲಿ’ಸೈನಿಕ 2′ ಸಿನಿಮಾದ ಟೀಸರ್ ನ್ನು ಹಂಚಿಕೊಂಡಿದ್ದಾರೆ.

‘ಸೈನಿಕ 2’ ಚಿತ್ರದ ಅಧಿಕೃತ ಟೀಸರ್ ಇದೀಗ ನಿಮ್ಮ ಮುಂದೆ. ದೇಶಭಕ್ತಿ, ಧೈರ್ಯ, ಕರ್ತವ್ಯ ಮತ್ತು ಹೋರಾಟದ ಮತ್ತೊಂದು ಅದ್ಭುತ ಅಧ್ಯಾಯಕ್ಕೆ ಸಾಕ್ಷಿಯಾಗುವ ಕ್ಷಣ ಬಂದಿದೆ ಎಂದು ಸಿಪಿ ಯೋಗೇಶ್ವರ್ ಬರೆದುಕೊಂಡಿದ್ದಾರೆ.

‘ಸೈನಿಕ 2’ ಸಿನಿಮಾ ಸಿ. ಪಿ. ಯೋಗೇಶ್ವರ್ ಅವರ ಅಭಿನಯದ  ‘ಸೈನಿಕ’  ಸಿನಿಮಾದ ಮುಂದುವರೆದ ಭಾಗವಾಗಿದೆ. ಸಿನಿಮಾದ ಟೀಸರ್ ಪೌರಾಣಿಕ ಕಥೆಯಿಂದ ಆರಂಭವಾಗುತ್ತದೆ. ರಾಜರ ಕಾಲದ  ಸೈನಿಕರಿಂದ ಹಿಡಿದು ಈವರೆಗೆ ಸೈನಿಕರ ಬಲಿದಾನವನ್ನು ಟೀಸರ್ ನ ಆರಂಭದಲ್ಲಿ ತೋರಿಸಲಾಗಿದೆ. ಬಳಿಕ ತಂದೆ ಮತ್ತು ಮಗ ಇಬ್ಬರೂ ಸೈನಿಕ ಪಾತ್ರದಲ್ಲಿ ಎದುರಾಳಿಗಳ ಮೇಲೆ ಯುದ್ಧ ಮಾಡುವುದನ್ನು ನೋಡಬಹುದು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!