‘ರೋಲೆಕ್ಸ್’ ಪೋಸ್ಟರ್ ಬಿಡುಗಡೆ

ಕೋಮಲ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ‘ರೋಲೆಕ್ಸ್’ ಚಿತ್ರದ ತಂಡ ವಿಶೇಷ ಗ್ಲಿಂಪ್ಸ್ ಹಾಗೂ ಹೊಸ ಪೋಸ್ಟರ್ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದೆ.

ಚಿತ್ರತಂಡ ಕೋಮಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದೆ. ಚಿತ್ರದ ಹೊಸ ಪೋಸ್ಟರ್‌ನಲ್ಲಿ ಕೋಮಲ್  ಸ್ಟೈಲಿಷ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಅಂಬಟಿ ಮಧು ಮೋಹನ್ ನಿರ್ಮಾಣದಲ್ಲಿ, ಶ್ರೀನಿವಾಸ್ ಮಂಡ್ಯ ನಿರ್ದೇಶನದ  ‘ರೋಲೆಕ್ಸ್’  ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ. ರಾಕೇಶ್ ತಿಲಕ್ ಛಾಯಾಗ್ರಹಣ, ಅರವಿಂದ್ ರಾಜ್ ಸಂಕಲನ ನಿರ್ವಹಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಮುರಳಿಕೃಷ್ಣ ಹಾಗೂ ಕ್ರಿಯೇಟಿವ್ ಹೆಡ್ ಆಗಿ ರಾಜೇಶ್ ವರ್ಮ ಕೆಲಸ ಮಾಡುತ್ತಿದ್ದಾರೆ.

ರೋಲೆಕ್ಸ್’ ಚಿತ್ರ ಕೌಟುಂಬಿಕ ಹಾಸ್ಯಭರಿತ ಸಿನಿಮಾವಾಗಿದ್ದು, ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡುವ ಭರವಸೆ ಮೂಡಿಸಿದೆ.  ಚಿತ್ರದಲ್ಲಿ ಕೋಮಲ್ ತಮ್ಮ ವೃತ್ತಿಜೀವನದ ವಿಭಿನ್ನ ಪಾತ್ರ ಹಾಗೂ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!