ಬಾಲಿವುಡ್‌ಗೆ ಮಹೇಶ್ ಭಟ್ ಗುಡ್‌ಬೈ!

ಬಾಲಿವುಡ್‌ನ ಹಿರಿಯ ನಿರ್ದೇಶಕ, ನಿರ್ಮಾಪಕ  ಮಹೇಶ್ ಭಟ್ ಚಿತ್ರ ನಿರ್ದೇಶನಕ್ಕೆ ಅಧಿಕೃತವಾಗಿ ಗುಡ್‌ಬೈ ಹೇಳಿದ್ದಾರೆ.

‘ಇನ್ನು ಮುಂದೆ ಯಾವುದೇ ಸಿನಿಮಾವನ್ನು ನಿರ್ದೇಶಿಸುವುದಿಲ್ಲ. ಇಂದಿನ ಸಿನಿಮಾ ನಿರ್ಮಾಣ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಿದೆ. ತಮ್ಮ ಜೀವನದ ಮುಂದಿನ ಹಂತವನ್ನು ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವುದಕ್ಕೆ ಮೀಸಲಿಡುವುದಾಗಿ’  ಸ್ಪಷ್ಟಪಡಿಸಿದ್ದಾರೆ.

‘ಇಂದಿನ ಸಿನಿಮಾ ಕ್ಷೇತ್ರದಲ್ಲಿ ಕಥೆ, ಕಂಟೆಂಟ್ ಮತ್ತು ಮಾರುಕಟ್ಟೆ ತಂತ್ರಗಳು ಮೊದಲೇ ನಿರ್ಧಾರವಾಗುತ್ತವೆ. ಬರವಣಿಗೆ ಆರಂಭಕ್ಕೂ ಮುನ್ನವೇ ಚಿತ್ರದ ಸ್ವರೂಪ ನಿಗದಿಯಾಗುವುದರಿಂದ ನಿರ್ದೇಶಕರ ಸೃಜನಶೀಲತೆಗೆ ಅವಕಾಶ ಕಡಿಮೆಯಾಗಿದೆ. ಈ ಕಾರಣದಿಂದ ನಿರ್ದೇಶನದಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದಾಗಿ’ ಹೇಳಿದ್ದಾರೆ.

2020ರ ‘ಸಡಕ್ 2’  ತಮ್ಮ ಕೊನೆಯ ಸಿನಿಮಾ ಎಂದು ಮಹೇಶ್ ಭಟ್ ಅಧಿಕೃತವಾಗಿ ಘೋಷಿಸಿದ್ದಾರೆ. 5 ದಶಕಗಳ ಸಿನಿ ಪಯಣದಲ್ಲಿ 50ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿರುವ ಮಹೇಶ್ ಭಟ್ಭಾ ವನಾತ್ಮಕ ಹಾಗೂ ಕಮರ್ಷಿಯಲ್ ಚಿತ್ರಗಳ ಮೂಲಕ ವಿಭಿನ್ನ ಗುರುತನ್ನು ಮೂಡಿಸಿದ್ದಾರೆ. ‘ಅರ್ಥ್’, ‘ಸಾರಂಶ್’, ‘ನಾಮ್’, ‘ದಿಲ್ ಹೈ ಕಿ ಮಾಂತಾ ನಹೀ’, ‘ಸಡಕ್’ ಸೇರಿದಂತೆ ಹಲವು ಕ್ಲಾಸಿಕ್ ಹಾಗೂ ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!