‘ಶೈಬ್ಯ’ ಚಿತ್ರದ ಚಿತ್ರೀಕರಣ ಪೂರ್ಣ

ಶ್ರದ್ಧಾ ಮೂವೀಸ್ ಲಾಂಛನದಲ್ಲಿ ಯಶೋಧ ಸಣ್ಣಪನವರ್ ಅವರು ನಿರ್ಮಿಸಿರುವ ‘ಶೈಬ್ಯ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರಕ್ಕೆ 48ದಿನಗಳ ಚಿತ್ರಿಕರಣ ನಡೆದಿದೆ. ಚಿತ್ರಿಕರಣ ನಂತರದ ಕಾರ್ಯಗಳು ಮುಕ್ತಾಯವಾಗಿದ್ದು, ಸದ್ಯದಲ್ಲೆ ಚಿತ್ರ ಸೆನ್ಸಾರ್ ಮುಂದೆ ಬರಲಿದೆ.
ಒಬ್ಬ ಕೆಳದರ್ಜೆ ವ್ಯಕ್ತಿಯು ತನ್ನ ಸ್ವಾರ್ಥಕ್ಕಾಗಿ ಅವಶ್ಯಕವಾದ ಸಂಪತ್ತನ್ನು, ಹೆಸರನ್ನು ಗಳಿಸಲು ಮೌಡ್ಯಗಳ ಬೆನ್ನೆರಿ ಹೊರಟಾಗ ಬರಸಿಡಿಲಿನಂತೆ ಕೆಲವೊಂದು ಅಚಾತುರ್ಯಗಳು ಶುರುವಾಗುತ್ತ ಹೋಗುತ್ತದೆ. ಹೀಗೆ ಸಾಗುವ ಚಿತ್ರಕಥೆಯ ಅಂತ್ಯವೇನು? ಮೂಡನಂಬಿಕೆ ಪ್ರಪಂಚದ ಜನರನ್ನು ಎಷ್ಟು ಆವರಿಸಿದೆ ಅನ್ನುವುದೇ ಚಿತ್ರದ ತಿರುಳು. ‘ಶೈಬ್ಯ` ರೊಮ್ಯಾಂಟಿಕ್, ಥ್ರಿಲ್ಲರ್ ಹಾಗೂ ಕಾಮಿಡಿ ಕಥಾ ಆಧಾರಿತ ಚಿತ್ರ.
ನಿರ್ಮಾಪಕಿ ಯಶೋಧ ಸಣ್ಣಪ್ಪನವರ್ ಅವರು ಬರೆದಿರುವ ಕಥೆಗೆ ಎಂ.ಜಿ.ಆರ್ ಅವರು ಚಿತ್ರಕಥೆ ಬರೆದು ನಿರ್ದೆÃಶನ ಮಾಡಿದ್ದಾರೆ. ಸಂಭಾಷಣೆಯನ್ನು ನಿರ್ದೆಶಕರೆ ಬರೆದಿದ್ದಾರೆ. ಎಂ.ಜಿ.ಆರ್ ಅವರು ತೆಲುಗಿನ ಕೆಲವು ಚಿತ್ರಗಳಿಗೆ ಸಹ ನಿರ್ದೆಶಕರಾಗಿ ದುಡಿದಿದ್ದಾರೆ.
ರಂಗಭೂಮಿಯಲ್ಲಿ ೨ವರ್ಷ ಅನುಭವವಿರುವ, ಹರಹರ ಮಹದೇವ, ತ್ರಿವೇಣಿ ಸಂಗಮ, ಶಾಂತಂ ಪಾಪಂ ಮುಂತಾದ ಧಾರಾವಾಹಿಗಳಲ್ಲಿ ಹಾಗೂ ಕೇಸ್ ನಂ೧೮\೯, ದರ್ಪಣ, ಲೈಲಾ ಮಜ್ನು ಲವ್ ಸ್ಟೊÃರಿ ಚಿತ್ರಗಳಲ್ಲಿ ನಟಿಸಿರುವ ಸನ್ಮಿತ್ ವಿಹಾನ್ ಈ ಚಿತ್ರದ ನಾಯಕ. ಮೇಘಶ್ರಿ ಗೌಡ, ಮಿಲನ ರಮೇಶ್, ಗಣೇಶ್ ರಾವ್, ಕುರಿ ಪ್ರತಾಪ್, ಮಣಿಕುಮಾರ್, ಮನು, ರಚಿತ, ಕವಿತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಎರಡು ಹಾಡುಗಳಿರುವ ಈ ಚಿತ್ರಕ್ಕೆ ಕಾರ್ತಿಕ್ ಶರ್ಮ ಸಂಗೀತ ನೀಡಿದ್ದಾರೆ. ನಾಗರಾಜ ಮೂರ್ತಿ ಛಾಯಾಗ್ರಹಣ ಹಾಗೂ ಆಲ್ವಿನ್, ಶಿವಶಂಕರ್ ಅವರ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ಸಿದ್ದು ಒಡೆಯರ್ ಬರೆದಿದ್ದಾರೆ. ಗಗನ್ ಕುಮಾರ್ ಹಿನ್ನಲೆ ಸಂಗೀತ ನೀಡಿದ್ದಾರೆ.
`

Be the first to comment

Leave a Reply

Your email address will not be published. Required fields are marked *

Translate »
error: Content is protected !!