‘ದೃಶ್ಯಂ 3’ಗೆ ಸಂಕಷ್ಟ

ಸೂಪರ್‌ಸ್ಟಾರ್ ಮೋಹನ್‌ಲಾಲ್ ನಟನೆಯ ‘ದೃಶ್ಯಂ 3’  ಚಿತ್ರದಲ್ಲಿ ಬಳಸಿರುವ ಕಾರಿನ ನೋಂದಣಿ ಸಂಖ್ಯೆ ತನ್ನ ವಾಹನದ್ದು ಎಂದು ಆರೋಪಿಸಿ ರೈತರೊಬ್ಬರು ನಿರ್ಮಾಪಕ ಹಾಗೂ ನಿರ್ದೇಶಕರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.

ಇಡುಕ್ಕಿ ಜಿಲ್ಲೆಯ ಕುಂಚಿತ್ತಣ್ಣಿ ನಿವಾಸಿ ಆರ್.ಡಿ. ರಾಜೀವ್ ಎಂಬ ರೈತ, ‘ದೃಶ್ಯಂ 3’ ಚಿತ್ರದಲ್ಲಿ ಜಾರ್ಜ್‌ಕುಟ್ಟಿ ಪಾತ್ರ ಬಳಸುವ ವಾಹನದ ‘KL 69 D 2772’ ನಂಬರ್ ಪ್ಲೇಟ್ ತಮ್ಮ ಹೆಸರಿನಲ್ಲಿರುವ ವಾಹನಕ್ಕೆ ಸೇರಿದ್ದು ಎಂದು  ನಿರ್ಮಾಪಕ ಆಂಟೋನಿ ಪೆರುಂಬಾವೂರ್ ಹಾಗೂ ನಿರ್ದೇಶಕ ಜೀತು ಜೋಸೆಫ್ ವಿರುದ್ಧದ  ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸ್ನೇಹಿತರ ಮೂಲಕ ಈ ವಿಷಯ ತಿಳಿದುಕೊಂಡ ರಾಜೀವ್ ಬಳಿಕ  ಸಿನಿಮಾ ವೀಕ್ಷಿಸಿ ನಂಬರ್ ಪ್ಲೇಟ್ ಬಳಕೆ ದೃಢಪಡಿಸಿಕೊಂಡಿದ್ದಾರೆ. ವಾಹನದ ಆರ್‌ಸಿ ದಾಖಲೆಗಳನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ. ಅವರು ಚಿತ್ರತಂಡ ಬಹಿರಂಗ ಕ್ಷಮೆಯಾಚನೆ ಮಾಡಬೇಕು. ವಿವಾದಿತ ನಂಬರ್ ಕಾಣಿಸುವ ದೃಶ್ಯಗಳನ್ನು ಚಿತ್ರದಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ.

‘ತಮ್ಮ ಬಿಳಿ ಬಣ್ಣದ ಮಹೀಂದ್ರಾ ಸ್ಕಾರ್ಪಿಯೋ ವಾಹನದ ನೋಂದಣಿ ಸಂಖ್ಯೆಯನ್ನು ಚಿತ್ರದಲ್ಲಿ ಬೇರೆ ವಾಹನಕ್ಕೆ ಬಳಸಲಾಗಿದೆ. ಸಿನಿಮಾ ಬಿಡುಗಡೆಯಾದ ಬಳಿಕ ಸಾರ್ವಜನಿಕರು ತಮ್ಮನ್ನು ‘ದೃಶ್ಯಂ ರಾಜೀವ್’ ಎಂದು ಕರೆಯುತ್ತಿದ್ದಾರೆ. ವಾಹನವನ್ನು ‘ದೃಶ್ಯಂ ಕಾರು’ ಎಂದು ಗುರುತಿಸುತ್ತಿದ್ದಾರೆ. ಚಿತ್ರದ ಕಥೆಯೊಂದಿಗೆ ತಮ್ಮ ವಾಹನದ ಸಂಖ್ಯೆ ಸಂಪರ್ಕಗೊಂಡಿರುವುದು ಭವಿಷ್ಯದಲ್ಲಿ ಕಾನೂನು ಹಾಗೂ ವೈಯಕ್ತಿಕ ಸಮಸ್ಯೆಗಳಿಗೆ ಕಾರಣವಾಗಬಹುದು’ ಎಂದು ಆತಂಕ  ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಮುನ್ನಾರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!