ಬಲರಾಮನ ದಿನಗಳು

ಬಲರಾಮನ ದಿನಗಳು ‘ಕ್ವಾಟರ್ರು’ ಹಾಡಿಗೆ ತಾರಾ ಚಾಲನೆ

ಕೆಎಂ ಚೈತನ್ಯ ಅವರ ನಿರ್ದೇಶನದ, ಬಲರಾಮನ ದಿನಗಳು ಚಿತ್ರದ ರೇಟ್ರೋ ಶೈಲಿಯ ಕ್ವಾಟರ್ರು ಹಾಡನ್ನು ಹಿರಿಯನಟಿ ತಾರಾ ಅನುರಾಧಾ ಅವರು ಬಿಡುಗಡೆ ಮಾಡಿದರು.

ಸಂತೋಷ್ ನಾರಾಯಣನ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರೋ ಈ ಹಾಡಿಗೆ ನಟಿ ವಂದಿತಾಗೌಡ ಹೆಜ್ಜೆ ಹಾಕಿದ್ದಾರೆ. ವಿನೋದ್ ಪ್ರಭಾಕರ್, ಪ್ರಿಯಾ ಆನಂದ್ ಅಭಿನಯದ ಈ ಚಿತ್ರವನ್ನು ಪದ್ಮಾವತಿ ಜಯರಾಮ್ ಹಾಗೂ ಶ್ರೇಯಸ್ ಅವರು ನಿರ್ಮಿಸಿದ್ದಾರೆ.

ಈ ವೇಳೆ ನಟಿ ತಾರಾ ಮಾತನಾಡುತ್ತ ಈ ಪೆಪ್ಪಿ ಸಾಂಗ್ ತುಂಬಾ ಚನ್ನಾಗಿದೆ, ಶ್ರೇಯಸ್ ತುಂಬಾ ಪ್ಯಾಷನ್ ಇರೋ ನಿರ್ಮಾಪಕ. ಆತನಿಗೆ ವಿನೋದ್ ಕಂಡರೆ ತುಂಬಾ ಪ್ರೀತಿ, ಅಲ್ಲದೆ ಪದ್ಮಮ್ಮ ಕೂಡ ಒಳ್ಳೇ ಪ್ರೊಡ್ಯೂಸರ್, ಅವರು ಇಡೀ ತಂಡಕ್ಕೆ ತಾಯಿ ಎನ್ನಬಹುದು. ಮೂರು ಜನ ಸೇರಿ ಇಡೀ ಚಿತ್ರವನ್ನು ತುಂಬಾ ಚೆನ್ನಾಗಿ ತೆಗೆದುಕೊಂಡು ಹೋಗಿದ್ದಾರೆ. ವೇಣು ಕ್ಯಾಮೆರಾ ವರ್ಕ್ ಚೆನ್ನಾಗಿದೆ. ಸಿನಿಮಾ ತುಂಬಾ ಕ್ಲಾಸಿಕ್‌ ಆಗಿ ಮೂಡಿಬಂದಿದೆ.

ಬಲರಾಮನ ದಿನಗಳು

ಸಂತೋಷ್ ನಾರಾಯಣ್‌ರಂಥ ದುಬಾರಿ ಮ್ಯೂಸಿಕ್ ಡೈರೆಕ್ಟರಿಂದ ಕೆಲಸ ತಗೊಂಡಿದ್ದಾರೆ, ಅವರೂ ಸಹ ವೇಣು ಕೆಲಸದ ಬಗ್ಗೆ ಹೊಗಳಿದ್ದಾರೆ. ಟಿ.ಸೀರೀಸ್‌ನವರು ಅಷ್ಟು ಸುಲಭವಾಗಿ ಆಡಿಯೋ ರೈಟ್ಸ್ ತಗೊಳ್ಳುವವರಲ್ಲ, ಬಲರಾಮನ ದಿನಗಳು ದೊಡ್ಡಚರಿತ್ರೆ ಸೃಷ್ಟಿಸುವುದರಲ್ಲಿ ಯಾವುದೇ ಸಂದೇಹವಿಲ್ಲ, ನಾನೇ ಮೊದಲು ಸಿನಿಮಾ ನೋಡಿಬಿಡಬೇಕು ಎನಿಸುತ್ತಿದೆ ಎಂದರು.

ನಿರ್ಮಾಪಕ ಶ್ರೇಯಸ್ ಮಾತನಾಡಿ ಇವತ್ತು ನಮ್ಮ ಸಿನಿಮಾದ ಮೂರನೇ ಹಾಡನ್ನು ರಿಲೀಸ್ ಮಾಡಿದ್ದೇವೆ, ಸದ್ಯದಲ್ಲೇ ಮತ್ತೊಂದು ಸಾಂಗ್ ಹಾಗೂ ಟ್ರೈಲರ್ ರಿಲೀಸ್ ಮಾಡುವ ಪ್ಲಾನ್ ಇದೆ ಎಂದರು.

ನಿರ್ಮಾಪಕಿ ಪದ್ಮಾವತಿ ಜಯರಾಮ್ ಮಾತನಾಡಿ ಚಿತ್ರದ ಬಗ್ಗೆ ನನಗೆ ಯಾವುದೇ ರೀತಿಯ ಭಯವಿಲ್ಲ, ಏಕೆಂದರೆ ನಿರ್ದೇಶಕರ ಮೇಲೆ ತುಂಬಾ ವಿಶ್ವಾಸವಿದೆ. ಇಂಥ ಸೀನಿಯರ್‌ಗಳನ್ನೆಲ್ಲ ನನ್ನ ಮಗ ಕರೆತಂದಿದ್ದಾನೆಂಬ ಖುಷಿಯೂ ಇದೆ ಎಂದು ಹೇಳಿದರು.

ಬಲರಾಮನ ದಿನಗಳು

ನಿರ್ದೇಶಕ ಕೆ.ಎಂ. ಚೈತನ್ಯ ಮಾತನಾಡಿ ಬಲರಾಮನ ದಿನಗಳು ಚಿತ್ರದಲ್ಲಿ ಒಟ್ಟು ೭ ಹಾಡುಗಳಿವೆ. ಇದು ಮೂರನೇ ಹಾಡು, ವಿನೋದ್ ಪ್ರಭಾಕರ್ ತುಂಬಾ ಟ್ಯಾಲೆಂಟ್ ಇರುವ ಕಲಾವಿದ, ಈ ಚಿತ್ರವನ್ನು ಥಿಯೇಟರಿನಲ್ಲೇ ನೋಡಬೇಕು. ಆಗಲೇ ಫೀಲ್ ಬರೋದು. ಆ ದಿನಗಳು ಬಿಡುಗಡೆಯಾದ 19 ವರ್ಷಗಳ ನಂತರ ಈ ಸಿನಿಮಾ ಮಾಡಲು ಸಾಕಷ್ಟು ಪುಸ್ತಕಗಳನ್ನು ಸ್ಟಡಿ ಮಾಡಿ ಅಂಡರ್‌ವರ್ಡ್ಲ್ ಬಗ್ಗೆ ತಿಳಿದುಕೊಂಡು ಕಥೆ ಬರೆದೆ, ಅದರ ಮತ್ತೊಂದು ವರ್ಷನ್ ಇದು ಎಂದು ಹೇಳಿದರು.

ನಾಯಕ ವಿನೋದ್ ಪ್ರಭಾಕರ್ ಮಾತನಾಡಿ ಮಾದೇವ ನಂತರ ಕಮಿಟ್ ಆದ ಚಿತ್ರವಿದು, ಒಬ್ಬ ನಟನಾಗಿ ಯಾವುದೇ ಪಾತ್ರ ಮಾಡಲು ನಾನು ಸಿದ್ದ, ಅದರಲ್ಲೂ ಇದೊಂದು ಕಾಲ್ಪನಿಕ ಕಥೆ, ಬಯೋಪಿಕ್ ಮಾಡುವಾಗ ಭಯ ಇದ್ದೇ ಇರುತ್ತದೆ, ನನ್ನ ಸಿನಿ ಕೆರಿಯರ್‌ನಲ್ಲಿ ಬಿಗ್ಗೆಸ್ಟ್ ಚಿತ್ರವಿದು, ಕೆವಿಎನ್ ಮೂಲಕ ರಿಲೀಸ್ ಆಗ್ತಿರುವುದು ನಮ್ಮ ಚಿತ್ರಕ್ಕೆ ಆನೆಬಲ ಸಿಕ್ಕಂತಾಗಿದೆ ಎಂದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!