ಕ್ಷಮೆಯಾಚಿಸಿದ ‘ಪೆದ್ದಿ’ ನಿರ್ದೇಶಕ

‘ಪೆದ್ದಿ’ ಚಿತ್ರದಲ್ಲಿ ನಟಿ ಜಾನ್ವಿ ಕಪೂರ್ ಅವರ ಪಾತ್ರದ ಚಿತ್ರಣದ ಕುರಿತು ಉಂಟಾದ ತೀವ್ರ ವಿವಾದದ ಬಳಿಕ ನಿರ್ದೇಶಕ ಬುಚ್ಚಿ ಬಾಬು ಸನಾ ಅಧಿಕೃತವಾಗಿ ಕ್ಷಮೆಯಾಚಿಸಿದ್ದಾರೆ.

ಪ್ರೇಕ್ಷಕರ ಆಕ್ಷೇಪಕ್ಕೆ ಕಾರಣವಾದ ಕೆಲವು ವಿವಾದಾತ್ಮಕ ದೃಶ್ಯಗಳನ್ನು ಚಿತ್ರದಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದು ಬುಚ್ಚಿ ಬಾಬು ಸನಾ ತಿಳಿಸಿದ್ದಾರೆ.

‘ನಾಯಕ ಪೆದ್ದಿಯ ಪಾತ್ರವು ಗ್ರಾಮೀಣ ಹಿನ್ನೆಲೆಯಿಂದ ಬಂದ ವ್ಯಕ್ತಿ. ಅವನ ವ್ಯಕ್ತಿತ್ವದ ರಗಡ್ ಸ್ವಭಾವವನ್ನು ತೋರಿಸುವ ಉದ್ದೇಶದಿಂದ ಕೆಲವು ದೃಶ್ಯಗಳನ್ನು ಸೇರಿಸಲಾಗಿತ್ತು. ಆದರೆ ಕೆಲವು ಶಾಟ್‌ಗಳು ತಪ್ಪು ಸಂದೇಶ ನೀಡುವ ರೀತಿಯಲ್ಲಿ ಮೂಡಿಬಂದಿರುವುದನ್ನು ಬುಚ್ಚಿ ಬಾಬು ಸನಾ ಅವರು ಒಪ್ಪಿಕೊಂಡಿದ್ದಾರೆ.

ವಿವಾದ ಹೆಚ್ಚಾದ ಹಿನ್ನೆಲೆಯಲ್ಲಿ ಆ ದೃಶ್ಯಗಳನ್ನು ಚಿತ್ರದಿಂದ ತೆಗೆದುಹಾಕಲಾಗಿದೆ.  ಯಾವುದೇ ಮಹಿಳಾ ಪಾತ್ರವನ್ನು ಅವಮಾನಿಸುವ ಅಥವಾ ವಸ್ತುವಿನಂತೆ ಬಿಂಬಿಸುವ ಉದ್ದೇಶವಿರಲಿಲ್ಲ ಎಂದು  ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆಯಾಚನೆಯ ಪೋಸ್ಟ್ ಹಂಚಿಕೊಂಡಿದ್ದಾರೆ.

‘ಪೆದ್ದಿ’ ಚಿತ್ರದಲ್ಲಿ ಜಾನ್ವಿ ಕಪೂರ್ ನಿರ್ವಹಿಸಿರುವ ಅಚಿಯಮ್ಮ ಪಾತ್ರದ ಚಿತ್ರಣ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಕಥೆಗೆ ಅಗತ್ಯವಿಲ್ಲದ ರೀತಿಯಲ್ಲಿ ನಟಿಯ ದೈಹಿಕ ಆಕರ್ಷಣೆಯನ್ನು ಹೈಲೈಟ್ ಮಾಡಲಾಗಿದೆ ಎಂಬ ಆರೋಪ ಪ್ರೇಕ್ಷಕರಿಂದ ಕೇಳಿ ಬಂದಿತ್ತು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!