ಜಪಾನಿನಲ್ಲಿ ‘ಧುರಂಧರ್’ ಬಿಡುಗಡೆ

ರಣ್ವೀರ್ ಸಿಂಗ್ ನಟಿಸಿದ ‘ಧುರಂಧರ್’ ಸಿನಿಮಾ ಜು.10 ರಂದು  ಜಪಾನಿನಲ್ಲಿ ತೆರೆಗೆ ಬರಲಿದೆ.

ಜಪಾನಿನಲ್ಲಿ ಭಾರತೀಯ ಸಿನಿಮಾಗಳು ದೊಡ್ಡ ಗಳಿಕೆ ಮಾಡುತ್ತಾ ಬಂದಿವೆ. ಬಾಲಿವುಡ್ ಮಾತ್ರವಲ್ಲದೆ ತಮಿಳು, ತೆಲುಗು ಸಿನಿಮಾಗಳು  ಜಪಾನಿನಲ್ಲಿ ದೊಡ್ಡ ಕಲೆಕ್ಷನ್ ಕಾಣುತ್ತವೆ. ಇದೀಗ ‘ಧುರಂಧರ್’ ಸಿನಿಮಾ ಜಪಾನಿನಲ್ಲಿ ಬಿಡುಗಡೆ ಆಗಲಿದ್ದು, ಅದು ಹೇಗೆ ಮ್ಯಾಜಿಕ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾ ಅಮೆರಿಕ ಸೇರಿದಂತೆ ಇತರ ಕೆಲವು ದೇಶಗಳಲ್ಲಿ ದೊಡ್ಡ ಮೊತ್ತದ ಗಳಿಕೆ ಮಾಡಿದೆ.  ಇದೀಗ ‘ಧುರಂಧರ್ 2’ ಸಿನಿಮಾ ಒಟಿಟಿಗೆ  ಬಂದಿದೆ.  ಜಪಾನಿನಲ್ಲಿ ಭಾರತೀಯ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆ ಇದ್ದು, ಅಲ್ಲಿ ‘ಧುರಂಧರ್’ ಹೇಗೆ ಸದ್ದು ಮಾಡಲಿದೆ ಎಂಬ ಕುತೂಹಲ  ಇದೆ.

ತಮಿಳಿನ ‘ಮಹಾರಾಜ’ ಸಿನಿಮಾ 2025 ರಲ್ಲಿ ಜಪಾನಿನಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿತ್ತು. ಬಳಿಕ ಕೆಲ ಭಾರತೀಯ ಸಿನಿಮಾಗಳು ಜಪಾನಿನಲ್ಲಿ ಬಿಡುಗಡೆ ಆಗಿದ್ದವಾದರೂ ದೊಡ್ಡ ಹಿಟ್ ಆಗಿರಲಿಲ್ಲ.

2025 ರಲ್ಲಿ ಬಿಡುಗಡೆ ಆದ ‘ಧುರಂಧರ್’ ಸಿನಿಮಾದಲ್ಲಿ ರಣ್ವೀರ್ ಸಿಂಗ್  ಜೊತೆಗೆ ಅಕ್ಷಯ್ ಖನ್ನಾ, ಆರ್ ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್  ಇತರರು ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಆದಿತ್ಯ ಧರ್.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!