ಬೀಚ್ ಬಳಿ ದುಬಾರಿ ಆಸ್ತಿ ಖರೀದಿಸಿದ ಯಶ್

ರಾಕಿಂಗ್‌ ಸ್ಟಾರ್‌ ಯಶ್‌ ದಂಪತಿ ಮಹಾರಾಷ್ಟ್ರದ ಜನಪ್ರಿಯ ಪ್ರವಾಸಿತಾಣ ಅಲಿಬಾಗ್‌  ನಲ್ಲಿರುವ ‘ಕಿಹಿಮ್ ಬೀಚ್’ ಬಳಿ ಭಾರಿ ಮೌಲ್ಯದ ಆಸ್ತಿಯನ್ನು ಖರೀದಿ ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಹಾಗೂ ಅವರ ಪತ್ನಿ ರಾಧಿಕಾ ಪಂಡಿತ್  ರಾಯಗಡ ಜಿಲ್ಲೆಯ ಅಲಿಬಾಗ್ ತಾಲೂಕಿನ ಕಾಮತ್ ಗ್ರಾಮದಲ್ಲಿ 24 ಕೋಟಿ ರೂ.ಗಳಿಗೆ ಎರಡು ಕೃಷಿ ಭೂಮಿಯನ್ನು ಖರೀದಿಸಿದ್ದಾರೆ.  ಈ ಭೂಮಿಗೆ 1.44 ಕೋಟಿ ರೂ. ಸ್ಟಾಂಪ್ ಡ್ಯೂಟಿ ಹಾಗೂ 60 ಸಾವಿರ ರೂ. ನೋಂದಣಿ ಶುಲ್ಕವನ್ನು ಪಾವತಿಸಿದ್ದಾರೆ. ಈ ಕೃಷಿ ಭೂಮಿ  1.306 ಎಕರೆ  ವಿಸ್ತೀರ್ಣವನ್ನು ಹೊಂದಿದೆ. ಈ ಆಸ್ತಿಯಲ್ಲಿ ಒಂದು ಮನೆ ಕೂಡ ಸೇರಿದೆ.

ಈ ಆಸ್ತಿಯು ಒಂದು ಬದಿಯಲ್ಲಿ ಹಳ್ಳಿಯ ರಸ್ತೆಯನ್ನು ಹೊಂದಿದ್ದರೆ, ಮತ್ತೊಂದು ಬದಿಯಲ್ಲಿ ಅರಬ್ಬಿ ಸಮುದ್ರದ ನೇರ ನೋಟವನ್ನು ಹೊಂದಿದೆ. ಮುಂಬೈಗೆ ಹತ್ತಿರವಿರುವ ಕಾರಣ ಇತ್ತೀಚಿನ ದಿನಗಳಲ್ಲಿ ಉದ್ಯಮಿಗಳು ಹಾಗೂ ಸೆಲೆಬ್ರಿಟಿಗಳಿಗೆ ಆಲಿಬಾಗ್ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಯಶ್ ಖರೀದಿ ಮಾಡಿರುವ ಈ ಆಸ್ತಿ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ದುಬಾರಿ ಮೌಲ್ಯವನ್ನು ಹೊಂದಿದೆ.

ಕರ್ನಾಟಕದ ಹೊರಗೆ ಯಶ್ ದಂಪತಿ ಹೂಡಿಕೆ ಮಾಡಿರುವ ದೊಡ್ಡ ರಿಯಲ್ ಎಸ್ಟೇಟ್ ವ್ಯವಹಾರ ಇದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಭಾರಿ ವೈರಲ್ ಆಗುತ್ತಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!