ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಕುರಿತ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ.
ಒಂದು ವರ್ಷ ಜಾಮೀನು ಸಿಗಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ಕೊಟ್ಟ ಬೆನ್ನಲ್ಲೇ ದರ್ಶನ್ ಮಾನಸಿಕವಾಗಿ ತೀವ್ರ ಕುಗ್ಗಿ ಹೋಗಿದ್ದಾರೆ ಎಂದು ಹೇಳಲಾಗಿದೆ. ಜೈಲಿನಲ್ಲಿ ಇರುವ ದರ್ಶನ್ ಅವರ ಸ್ಥಿತಿ ಕುರಿತು ಊಹಾಪೋಹಗಳು ಹರಡುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಫೋಟೋ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ದರ್ಶನ್ ಜೈಲಿನಲ್ಲಿ ಇದ್ದ ವೇಳೆ ಡೆವಿಲ್ ಚಿತ್ರ ಬಿಡುಗಡೆ ಆಗಿತ್ತು. ಜಾಮೀನು ಪಡೆದು ದರ್ಶನ್ ಚಿತ್ರದ ಶೂಟಿಂಗ್ ಪೂರ್ಣ ಮಾಡಿದ್ದರು.
ಸುಪ್ರೀಂ ಕೋರ್ಟ್ ದರ್ಶನ್ ಅವರ ಜಾಮೀನು ರದ್ದು ಮಾಡಿದ ಬಳಿಕ ಸಿನಿಮಾದ ವೃತ್ತಿ ಜೀವನ ಸಂಕಷ್ಟಕ್ಕೆ ಸಿಕ್ಕಿದೆ. ದರ್ಶನ್ ನಡೆಸಿದ ಜಾಮೀನು ಯತ್ನಗಳು ವಿಫಲ ಆಗಿವೆ.
—-





Be the first to comment