ಯೂನಿಟಿ ವರ್ಲ್ಡ್ ಪೇಜೆಂಟ್ಸ್

ಯೂನಿಟಿ ವರ್ಲ್ಡ್ ಪೇಜೆಂಟ್ಸ್ ಗೆ ಐವರು ಆಯ್ಕೆ

ಸ್ಟುಡಿಯೋ 32 ಪ್ರಸ್ತುತಪಡಿಸುವ ಕಾಸ್ಮೋಸ್ ಕ್ವೀನ್ ಇಂಡಿಯಾ 2026 ಮುಕ್ತಾಯಗೊಂಡಿದ್ದು ಒಟ್ಟು ಐದು ಸಾಧಕರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಯೂನಿಟಿ ವರ್ಲ್ಡ್ ಪೇಜೆಂಟ್ಸ್ ಸ್ಪರ್ಧೆಯಲ್ಲಿ ಪ್ರತಿನಿಧಿಸಲಿದ್ದಾರೆ.

ಮಿಸ್ ಟೀನ್ ಯುನಿಟಿ ವರ್ಲ್ಡ್ ಇಂಡಿಯಾ ಆಗಿ ಪಾಲಕ್ ಶಿವಕುಮಾರ್ ಶ್ರೀ, ಮಿಸ್ ಯುನಿಟಿ ವಲ್ಡ್ ಇಂಡಿಯಾ ಆಗಿ ಸುಶ್ಮಿತಾ ಗುಪ್ತ, ಮಿಸ್ಟರ್ ಯುನಿಟಿ ವರ್ಲ್ಡ್ ಇಂಡಿಯಾ ಆಗಿ ಪ್ರಿಯಾಂಶಾ ಮೊಹಂತಿ, ಮಿಸೆಸ್ ಯುನಿಟಿ ವರ್ಲ್ಡ್ ಇಂಡಿಯಾ ಆಗಿ ಆಶಾ ದೀಪಿಕಾ, ಮಿಸೆಸ್ ಯುನಿಟಿ ವರ್ಲ್ಡ್ ಕ್ಲಾಸಿಕ್ ಇಂಡಿಯಾ ಆಗಿ ಡಾ. ಕವಿತಾ ಶಶಿಕುಮಾರ್ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ. ಇವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಯೂನಿಟಿ ವರ್ಲ್ಡ್ ಪೇಜೆಂಟ್ಸ್

ವಿಜೇತರನ್ನು ವ್ಯಕ್ತಿತ್ವ ಅವಲೋಕನ, ಆತ್ಮವಿಶ್ವಾಸ, ಸಂವಹನ ಕಲೆ, ವೇದಿಕೆಯಲ್ಲಿ ಪ್ರಸ್ತುತಪಡಿಸುವ ಶೈಲಿ ಸೇರಿದಂತೆ ವಿವಿಧ ಮಾನದಂಡಗಳ ಮೂಲಕ ಆಯ್ಕೆ ಮಾಡಲಾಯಿತು. ಯೂಕಿ ಮತ್ಸುಧ್, ಸರ್ಗಂ ಕೌಶಲ್, ಅಮಿತ್ ಚೌಹಾನ್, ದೀಪಕ್ ಶಾಹಿ ತೀರ್ಪುಗಾರರ ಸಮಿತಿಯಲ್ಲಿ ಇದ್ದರು.

ಕಾಸ್ಮೋಸ್ ಕ್ವೀನ್ ಇಂಡಿಯಾ ಸಂಸ್ಥೆಯನ್ನು ಮೋನಿಕಾ ಶಾಹಿ ಹಾಗೂ ದೀಪಕ್ ಶಾಹಿ ಅವರು ಮುನ್ನಡೆಸುತ್ತಿದ್ದಾರೆ. ಇವರು ಪೇಟೆಂಜ್ ಕ್ಷೇತ್ರದಲ್ಲಿ 15 ವರ್ಷಕ್ಕೂ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ. ಇವರು ಪ್ರತಿಭೆ ಅನ್ವೇಷಣೆ ಮೂಲಕ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ತುಂಬಾ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲು ಅವಕಾಶವನ್ನು ಕಲ್ಪಿಸುತ್ತಿದ್ದಾರೆ.

ಯೂನಿಟಿ ವರ್ಲ್ಡ್ ಪೇಜೆಂಟ್ಸ್

Be the first to comment

Leave a Reply

Your email address will not be published. Required fields are marked *

Translate »
error: Content is protected !!