ಜುಲೈ 31ರಂದು ವಿಜಯ್ ಪುತ್ರನ ಸಿನಿಮಾ ಬಿಡುಗಡೆ

ತಮಿಳು ಚಿತ್ರರಂಗದ ಸ್ಟಾರ್ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶಕರಾಗಿ ಸಿನಿ ಜರ್ನಿ ಆರಂಭಿಸುತ್ತಿದ್ದಾರೆ.

ಜೇಸನ್ ಸಂಜಯ್ ನಿರ್ದೇಶನದ ಮೊದಲ ಸಿನಿಮಾ ‘ಸಿಗ್ಮ’ ಜುಲೈ 31ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಪ್ರತಿಷ್ಠಿತ ಲೈಕಾ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ.

ಯುವಜನತೆಯನ್ನು ಗುರಿಯಾಗಿಸಿಕೊಂಡು ನಿರ್ಮಿಸಲಾಗಿರುವ ಚಿತ್ರದಲ್ಲಿ ಸಂದೀಪ್ ಕೃಷ್ಣ ನಾಯಕನಾಗಿ ನಟಿಸಿದ್ದಾರೆ. ಫಾರಿಯಾ ಅಬ್ದುಲ್ಲಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡದ  ನಟ ಸಂಪತ್ ರಾಜ್  ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಎಸ್. ತಮನ್ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಕುತೂಹಲ ಮೂಡಿಸಿದೆ.

ಜೇಸನ್ ಸಂಜಯ್ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಾರೆ ಎಂಬ ನಿರೀಕ್ಷೆ  ಇತ್ತು. ಆದರೆ ಅವರು ನಿರ್ದೇಶನ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರದ ಕಥೆಯನ್ನು ಮೊದಲೇ ವಿಜಯ್ ಅವರಿಗೆ ವಿವರಿಸಿ ಅವರ ಒಪ್ಪಿಗೆ ಪಡೆದ ಬಳಿಕವೇ ಯೋಜನೆಗೆ ಚಾಲನೆ ನೀಡಲಾಗಿದೆ ಎನ್ನಲಾಗಿದೆ.

ವಿಜಯ್ ಪತ್ನಿ ಸಂಗೀತ ಅವರೊಂದಿಗೆ ವಿಚ್ಛೇದನದ ಸುದ್ದಿಸದ್ದು ಮಾಡಿದ್ದ ಬೆಳವಣಿಗೆಗಳ ನಡುವೆಯೇ ಜೇಸನ್ ಸಂಜಯ್ ತಮ್ಮ ಮೊದಲ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ವಿಜಯ್ ಅವರ ಬೆಂಬಲ ಹೇಗಿರಲಿದೆ ಎಂಬುದು  ಕುತೂಹಲದ ವಿಷಯವಾಗಿದೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!