‘ಪೆದ್ದಿ’ ಚಿತ್ರದ ಪ್ರಚಾರ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದಿದ್ದ ಜಾನ್ಹವಿ ಕಪೂರ್ ಕನ್ನಡದಲ್ಲೇ ಮಾತನಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
‘ಪೆದ್ದಿ’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಜಾನ್ಹವಿ ಕಪೂರ್ ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್ ಕುಮಾರ್ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
“ಶಿವರಾಜ್ ಕುಮಾರ್ ಅವರ ಜೊತೆ ನನಗೆ ಕೇವಲ ಒಂದು ಸೀನ್ ಮಾತ್ರ ಸಿಕ್ಕಿತ್ತು. ಆದರೆ ಆ ಒಂದು ದೃಶ್ಯದಲ್ಲೇ ಅವರು ಎಷ್ಟು ದೊಡ್ಡ ಕಲಾವಿದ ಅನ್ನೋದು ಅರ್ಥ ಆಯ್ತು. ಅವರ ಕಣ್ಣುಗಳೇ ತುಂಬಾ ಪವರ್‌ಫುಲ್. ಅವರು ತುಂಬಾ ಗಾಢವಾಗಿ ಅಭಿನಯಿಸುತ್ತಾರೆ. ಮುಂದೆ ಶಿವಣ್ಣ ಅವರಂತಹ ಮಹಾನ್ ನಟರೊಂದಿಗೆ ಹೆಚ್ಚು ಕೆಲಸ ಮಾಡುವ ಅವಕಾಶ ಸಿಗಲಿ ಎಂದು ಆಶಿಸುತ್ತೇನೆ” ಎಂದು ಹೊಗಳಿದ್ದಾರೆ.
‘ಪೆದ್ದಿ’ ಸಿನಿಮಾದಲ್ಲಿ ರಾಮ್ ಚರಣ್ ನಾಯಕನಾಗಿ ನಟಿಸಿದ್ದಾರೆ. ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಣ್ಣ ಗೌಡ ನಾಯ್ಡು ಪಾತ್ರದಲ್ಲಿ ನಟಿಸಿದ್ದು, ರಾಮ್ ಚರಣ್‌ಗೆ ಕುಸ್ತಿ ತರಬೇತಿ ನೀಡುವ ಪಾತ್ರ ಅವರದ್ದಾಗಿದೆ.
‘ಪೆದ್ದಿ’ ಸಿನಿಮಾವನ್ನು ಬುಚ್ಚಿಬಾಬು ಸನಾ ನಿರ್ದೇಶಿಸಿದ್ದಾರೆ. ರಾಮ್ ಚರಣ್ ಕ್ರಿಕೆಟಿಗ ಹಾಗೂ ಕುಸ್ತಿಪಟು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಎ.ಆರ್ ರೆಹಮಾನ್ ಸಂಗೀತ ನೀಡಿದ್ದಾರೆ.





Be the first to comment