ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ, ನಟಿ ತನಿಷಾ ಕುಪ್ಪಂಡಗೆ ‘ನಿನ್ನ ರೇಟ್ ಎಷ್ಟು’? ಎಂದು ಮೆಸೇಜ್ ಮಾಡಿದ್ದ ಫೋಟೋಗ್ರಾಫರ್ ಕೃತ್ಯದ ವಿರುದ್ಧ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
ನಟಿ ತನಿಷಾ ಕುಪ್ಪಂಡಗೆ ಫೋಟೋಗ್ರಾಫರ್ ಅನಿಲ್ ಕುಮಾರ್ ಎಂಬಾತ ‘ನಿನ್ನ ರೇಟ್ ಎಷ್ಟು?, ‘ಡೇಟಿಂಗ್ ಗೆ ಬರ್ತೀಯಾ ?’ಎಂದು ಕೇಳಿದ್ದಾನೆ. ಇದರಿಂದ ಆಕ್ರೋಶಗೊಂಡ ತನಿಷಾ ಕುಪ್ಪಂಡ ಫೋಟೋಗ್ರಾಫರ್ ಜನ್ಮ ಜಾಲಾಡಿದ್ದಾರೆ. ಅತ್ಯಂತ ಕೀಳು ಮಟ್ಟದ ಭಾಷೆಯಲ್ಲಿ ಮೆಸೇಜ್ ಮಾಡಿದ್ದವನ ಹಿನ್ನೆಲೆ ಚೆಕ್ ಮಾಡಿದ ತನಿಷಾ ಆತನ ಗುರುತನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.
ಅನಿಲ್ ಕುಮಾರ್ ಎಂಬ ಫೋಟೋಗ್ರಾಫರ್ ಕಳುಹಿಸಿದ್ದ ಅಸಭ್ಯ ಮೆಸೇಜ್ ಹಾಗೂ ಆತನ ಇನ್‌ಸ್ಟಾಗ್ರಾಮ್ ಪ್ರೊಫೈಲ್ ನ್ನು ತನಿಷಾ ಕುಪ್ಪಂಡ ಸ್ಕ್ರೀನ್‌ಶಾಟ್ ತೆಗೆದು ತಮ್ಮ ಸ್ಟೇಟಸ್‌ನಲ್ಲಿ ಹಾಕಿದ್ದಾರೆ. ‘ನೋಡಿ ಇವನ ಯೋಗ್ಯತೆಯನ್ನು’ ಎಂದು ತನಿಷಾ ಬರೆದುಕೊಂಡಿದ್ದಾರೆ.
ಫೋಟೋಗ್ರಾಫರ್ ಅನಿಲ್ ಕುಮಾರ್ ಕೃತ್ಯದ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ”ಕೇವಲ ಸ್ಕ್ರೀನ್‌ಶಾಟ್ ಹಾಕಿದರೆ ಸಾಲದು. ಇಂತಹ ನೀಚರನ್ನು ಜೈಲಿಗಟ್ಟಬೇಕು” ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.






Be the first to comment