ಜೀ ಕನ್ನಡದಲ್ಲಿ ‘ಲ್ಯಾಂಡ್ ಲಾರ್ಡ್​’ ಪ್ರಸಾರ

ಕನ್ನಡದ ಬ್ಲಾಕ್​​ಬಸ್ಟರ್ ಸಿನಿಮಾ ‘ಲ್ಯಾಂಡ್ ಲಾರ್ಡ್’ ಮೇ 23ರ ಶನಿವಾರ ಸಂಜೆ 4 ಗಂಟೆಗೆ ಜೀ ಕನ್ನಡದಲ್ಲಿ  ಪ್ರಸಾರವಾಗಲಿದೆ.

ಥಿಯೇಟರ್ ಹಾಗೂ ಒಟಿಟಿಯಲ್ಲಿ ಮಿಸ್ ಮಾಡಿಕೊಂಡವರು ಟಿವಿಯಲ್ಲಿ ಈ ಚಿತ್ರವನ್ನು ವೀಕ್ಷಿಸಬಹುದಾಗಿದೆ. ‘ಲ್ಯಾಂಡ್ ಲಾರ್ಡ್’ ಸಿನಿಮಾದಲ್ಲಿ 80ರ ದಶಕದ ಕಥೆ ಇದೆ.  ಸಿನಿಮಾ, ಶೋಷಣೆ, ಸಾಮಾಜಿಕ ಅಸಮಾನತೆ, ಬಡವರ ಮೇಲಿನ ದಬ್ಬಾಳಿಕೆ ಹಾಗೂ ಅದರ ವಿರುದ್ಧ ಧ್ವನಿ ಎತ್ತುವ ಕಥೆಯನ್ನು ಹೊಂದಿದೆ.  ಇಡೀ ಕುಟುಂಬ ಒಟ್ಟಾಗಿ ಕುಳಿತು ಆನಂದಿಸಬಹುದಾದ ಕೌಟುಂಬಿಕ ಚಿತ್ರ ಇದಾಗಿದೆ.

ಶಾಂತಿಯುತ ಬದುಕನ್ನು ಆಶಿಸುವ ರಾಚಯ್ಯ (ದುನಿಯಾ ವಿಜಯ್), ತನ್ನ ಪತ್ನಿ ನಿಂಗವ್ವ (ರಚಿತಾ ರಾಮ್) ಮತ್ತು ಮಗಳೊಂದಿಗೆ  ಪುಟ್ಟ ಜಮೀನನ್ನು ಹೊಂದಬೇಕೆಂಬ ಆಸೆಯಿಂದ ಬದುಕುತ್ತಿರುತ್ತಾನೆ. ಆದರೆ ಆ ಹಳ್ಳಿಯಲ್ಲಿ ಪ್ರಭಾವಶಾಲಿ ಜಮೀನ್ದಾರನಾದ ಸಣ್ಣ ಧಣಿ (ರಾಜ್ ಬಿ. ಶೆಟ್ಟಿ) ತನಗಿರುವ ರಾಜಕೀಯ ಹಾಗೂ ಸಾಮಾಜಿಕ ಬಲದಿಂದ ಇಡೀ ಗ್ರಾಮವನ್ನೇ ತನ್ನ ಹತೋಟಿಯಲ್ಲಿಟ್ಟುಕೊಂಡಿರುತ್ತಾನೆ.  ರಾಚಯ್ಯನಿಗೆ ಗ್ರಾಮಸ್ಥರು ಅನುಭವಿಸುತ್ತಿರುವ ಹಿಂಸೆ ಮತ್ತು ಭಯ ಅರಿವಾಗುತ್ತದೆ.  ರಾಚಯ್ಯ ಧಣಿಯ ದಬ್ಬಾಳಿಕೆಯನ್ನು ಸಹಿಸದೆ ಹಳ್ಳಿಯ ಜನರ ಪರವಾಗಿ ಧ್ವನಿ ಎತ್ತುವ ಜನನಾಯಕನಾಗಿ ಬದಲಾಗುತ್ತಾನೆ. ಇಡೀ ಕುಟುಂಬ ಒಟ್ಟಾಗಿ ಕುಳಿತು ಆನಂದಿಸಬಹುದಾದ ಕೌಟುಂಬಿಕ ಚಿತ್ರ ಇದಾಗಿದೆ.

ಚಿತ್ರದಲ್ಲಿ ದುನಿಯಾ ವಿಜಯ್ ಪಾತ್ರ ಗಮನ ಸೆಳೆದಿದೆ. ರಚಿತಾ ರಾಮ್   ಅವರು ಡಿ ಗ್ಲಾಮ್ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಜಮೀನ್ದಾರನ ಪಾತ್ರದಲ್ಲಿ ರಾಜ್ ಬಿ. ಶೆಟ್ಟಿ ಗಮನ ಸೆಳೆದಿದ್ದಾರೆ.  ಸಿನಿಮಾದಲ್ಲಿ ದುನಿಯಾ ವಿಜಯ್ ಮಗಳು ಮೋನಿಷಾ ನಟಿಸಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!