ಚೈತ್ರಾ ಆಚಾರ್‌ಗೆ ಅಶ್ಲೀಲ ಮೆಸೇಜ್

ನಟಿ ಚೈತ್ರಾ ಜೆ ಅಚಾರ್ ಅವರಿಗೆ ಇನ್‌ಸ್ಟಾಗ್ರಾಂ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸಿರುವ ಆರೋಪ ಕೇಳಿ ಬಂದಿದೆ.

‘ಮಹೇಶ್ ಹೊಸಮನಿ’  ಎಂಬ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಿಂದ ನಟಿಗೆ ಅವಾಚ್ಯ ಸಂದೇಶ ಕಳುಹಿಸಲಾಗಿದೆ. ಆ ಖಾತೆಯಲ್ಲಿ ಪೊಲೀಸ್ ಸಿಬ್ಬಂದಿಯ ಫೋಟೋವನ್ನು ಪ್ರೊಫೈಲ್ ಪಿಕ್ಚರ್ ಆಗಿ ಬಳಸಿರುವುದು ಕಂಡು ಬಂದಿದೆ.

ಪೊಲೀಸ್ ಸಿಬ್ಬಂದಿಯ ಫೋಟೋವನ್ನು ಪ್ರೊಫೈಲ್ ಚಿತ್ರವಾಗಿ ಬಳಸಿದ್ದ ಖಾತೆಯಿಂದ  ಅವಹೇಳನಕಾರಿ ಸಂದೇಶ ಬಂದಿದೆ. ಈ ಬೆಳವಣಿಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಕುರಿತು ನಟಿ ಚೈತ್ರಾ ಜೆ ಆಚಾರ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸಂದೇಶದ ಸ್ಕ್ರೀನ್‌ಶಾಟ್ ಹಂಚಿಕೊಂಡು ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ‘ಪೊಲೀಸಿಂಗ್ ಮಾಡುವ ಬದಲು ಈ ವ್ಯಕ್ತಿ ಮೋರಲ್ ಪೋಲಿಸಿಂಗ್ ಮಾಡುತ್ತಿರುವಂತಿದೆ. ಅಗತ್ಯ ಕ್ರಮ ಕೈಗೊಳ್ಳಿ’ ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಪೋಸ್ಟ್ ವೈರಲ್ ಆದ ಬಳಿಕ ಸಂದೇಶ ಕಳುಹಿಸಿದ್ದ ವ್ಯಕ್ತಿ ನಟಿಗೆ ಕ್ಷಮೆ ಕೇಳಿರುವುದಾಗಿ ತಿಳಿದುಬಂದಿದೆ.  ಚೈತ್ರಾ  ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದು,  “ಇದರಿಂದ ನನ್ನ ವೃತ್ತಿಜೀವನಕ್ಕೆ ತೊಂದರೆಯಾಗಬಹುದು, ದಯವಿಟ್ಟು ಪೋಸ್ಟ್ ತೆಗೆದುಹಾಕಿ” ಎಂದು ಆತ ಮನವಿ ಮಾಡಿದ್ದಾನೆ.  ನನ್ನ ವೃತ್ತಿಜೀವನದ ಬಗ್ಗೆ ಮಾತನಾಡುವಾಗ ಅವರಿಗೆ ಯಾವುದೇ ಸಮಸ್ಯೆ ಕಾಣುವುದಿಲ್ಲ. ಆದರೆ, ಅವರ ವಿಚಾರ ಬಂದಾಗ ಮಾತ್ರ ನಿಯಮಗಳು ಬದಲಾಗುತ್ತವೆಯೇ?’ ಎಂದು ಪ್ರಶ್ನಿಸಿದ್ದಾರೆ.

ಘಟನೆ ಬೆಳಕಿಗೆ ಬಂದ ನಂತರ ಮಹೇಶ್ ಹೊಸಮನಿ ಹೆಸರಿನ ಇನ್‌ಸ್ಟಾಗ್ರಾಂ ಖಾತೆ ಅಳಿಸಲಾಗಿದ್ದು ನಟಿ  ತಮ್ಮ ಸ್ಟೋರಿಗಳನ್ನು ತೆಗೆದುಹಾಕಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಯೊಬ್ಬರು, ಇನ್ನೂ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ದೂರು ಬಂದ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಶ್ಲೀಲ ಸಂದೇಶ ಬಂದ ಇನ್‌ಸ್ಟಾಗ್ರಾಂ ಖಾತೆ ನಿಜವಾಗಿಯೂ ಪೊಲೀಸ್ ಸಿಬ್ಬಂದಿಯದ್ದೇ ಆಗಿತ್ತೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ತಿಳಿಸಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!