ಲಾಕ್ಡೌನ್ ಘಟನೆಗಳನ್ನು ಇಟ್ಟುಕೊಂಡ ಸಿನಿಮಾ ಅದೇ ಹೆಸರಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.
ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಶೀಘ್ರದಲ್ಲೇ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ.
ಈ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಭಾಷೆಯ ಸೊಗಡು ಇರಲಿದೆ. ಸಿನಿಮಾದಲ್ಲಿ ಬೆಂಗಳೂರಿನ ವಿಜಯ್ ವಿಘ್ನೇಶ್ ಅವರು ಹೀರೋ ಆಗಿ ನಟಿಸಿದ್ದಾರೆ. ದಾವಣಗೆರೆಯ ವಾಣಿಶ್ರೀ ಶ್ರೀನಿವಾಸ್ ಅವರು ನಾಯಕಿ ಆಗಿ ನಟಿಸಿದ್ದಾರೆ.
ಶ್ರಾವಣಿ, ಅಶ್ವಿನಿ ಮುದ್ಗಲ್, ಮಮತಾ, ಗೋವಿಂದರಾಜು, ವೈಲಾ ಮುಂತಾದವರು ನಟಿಸಿದ್ದಾರೆ. ಶರಣಪ್ಪ ಸುಗ್ಗನಹಳ್ಳಿ ಛಾಯಾಗ್ರಹಣ ಮಾಡಿದ್ದಾರೆ. ಶಿವರಾಜ್ ಮೆಹೂ ಸಂಕಲನ ಕೆಲಸ ಸಿನಿಮಾಗಿದೆ.
ಜಾವೇದ್ ತಿಪ್ಪನಹಟ್ಟಿ ಅವರು ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಚಿತ್ರಕಥೆ, ಸಾಹಿತ್ಯ, ಸಂಗೀತದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ.
‘ಲಾಕ್ಡೌನ್ ಸಂದರ್ಭದಲ್ಲಿ ಹಲವರಿಗೆ ಸಂಕಷ್ಟ ಉಂಟಾಗಿತ್ತು. ಆದರೆ ಇದು ಕೆಲವರಿಗೆ ನಲಿವು ತಂದುಕೊಟ್ಟಿದೆ. ಅದಕ್ಕೆ ಟ್ಯಾಗ್ ಲೈನ್ನಲ್ಲಿ ವಿಷಾದ ಮತ್ತು ರಂಜನೆ ಎಂದು ಬರೆಯಲಾಗಿದೆ. ಬಳ್ಳಾರಿಯಲ್ಲಿ ಒಂದಷ್ಟು ಕಹಿ ಘಟನೆಗಳು ನಡೆದಿದ್ದನ್ನು ಚಿತ್ರಕತೆಗೆ ಅಳವಡಿಸಿಕೊಳ್ಳಲಾಗಿದೆ. ಈ ಚಿತ್ರದಲ್ಲಿನ ಸನ್ನಿವೇಶಗಳು ವಾಸ್ತವ. ಆದರೆ ಕಥೆ ಕಾಲ್ಪನಿಕವಾಗಿದೆ’ ಎಂದು ನಿರ್ದೇಶಕರು ಹೇಳಿದ್ದಾರೆ.





Be the first to comment