ವಿಜಯ್ ರಾಘವೇಂದ್ರ ನಟನೆಯ ‘ಶ್ರೀಮತಿ ಸಿಂದೂರ’ ಚಿತ್ರ ಮೇ ತಿಂಗಳಿನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.
ಚಿತ್ರದ ಶೂಟಂಗ್ ಮುಗಿದಿದ್ದು, ಅದ್ದೂರಿ ಸಮಾರಂಭದಲ್ಲಿ ಟೀಸರ್ ಹಾಗೂ ಸಾಂಗ್ ಗಳನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
‘ ಶ್ರೀಮತಿ ಸಿಂಧೂರ’ವನ್ನು ಡಿಎನ್ ನಾಗಿರೆಡ್ಡಿ ಬೆಂಬಲದೊಂದಿಗೆ ಆರ್ ಮತ್ತು ಆರ್ ಎಂಟರ್‌ಪ್ರೈಸಸ್ ಅಡಿಯಲ್ಲಿ ನಿರ್ಮಿಸಲಾಗಿದೆ. ನಾಗಿರೆಡ್ಡಿ ಕಥೆ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಆರ್ ಅನಂತರಾಜು ನಿರ್ದೇಶನ ಚಿತ್ರಕ್ಕಿದೆ. ವಿಜಯ್ ರಾಘವೇಂದ್ರ ಜೋಡಿಯಾಗಿ ಪ್ರಿಯಾ ಹೆಗ್ಡೆ ನಟಿಸಿದ್ದಾರೆ.
ಶ್ರೀಮತಿ ಸಿಂದೂರ ಆಕ್ಷನ್, ಹಾರರ್, ಥ್ರಿಲ್ಲರ್ ಮೀರಿದ ಆರೋಗ್ಯಕರ ಕೌಟುಂಬಿಕ ಮನರಂಜನಾ ಚಿತ್ರವಾಗಿದೆ. ಇದು ಎಲ್ಲಾ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ.
ನಿರ್ಮಾಪಕ ಡಿಎನ್ ನಾಗಿರೆಡ್ಡಿ, ‘ಶ್ರೀಮತಿ ಸಿಂದೂರ ಚಿತ್ರ 20 ವರ್ಷಗಳ ಕನಸು ಆಗಿದೆ. ಚಿತ್ರದ ಹಿಂದಿನ ಉದ್ದೇಶ ಕೇವಲ ಕಥೆ ಹೇಳುವುದಲ್ಲ. ಅರ್ಥಪೂರ್ಣ ಕೌಟುಂಬಿಕ ಮನರಂಜನಾ ಚಿತ್ರ ನೀಡುವುದರ ಜೊತೆಗೆ ಚಲನಚಿತ್ರ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಾಗಿದೆ’ ಎಂದು ಹೇಳಿದ್ದಾರೆ.
ಚಿತ್ರದಲ್ಲಿ ಹೊಸಪೇಟೆಯ 6.4 ಅಡಿ ಎತ್ತರದ ಬಾಡಿಬಿಲ್ಡರ್ ಹನುಮಂತನ ಪಾತ್ರ ಮಾಡಿದ್ದಾರೆ. ಚಿತ್ರವನ್ನು ಮೂಡಿಗೆರೆ, ಸಕಲೇಶಪುರ ಮತ್ತು ಚಿಕ್ಕಮಗಳೂರು ಸೇರಿದಂತೆ ಸುಂದರವಾದ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.
ರಾಜೇಶ್ ರಾಮನಾಥ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಕವಿರಾಜ್, ಕೆ ಕಲ್ಯಾಣ್, ನಿರ್ದೇಶಕಆರ್ ಅನಂತರಾಜು ಸಾಹಿತ್ಯ ಬರೆದಿದ್ದಾರೆ. ಪಿಕೆಹೆಚ್ ದಾಸ್ ಛಾಯಾಗ್ರಹಣ ಮಾಡಿದ್ದಾರೆ.
_





Be the first to comment