‘ವಸುದೇವ ಕುಟುಂಬ’ ನಿರ್ಮಾಪಕರ ವಿರುದ್ಧ ದೂರು

‘ವಸುದೇವ ಕುಟುಂಬ’ ಧಾರಾವಾಹಿಯ ನಿರ್ಮಾಪಕರು ಸರಿಯಾಗಿ ವೇತನ ಪಾವತಿಸಿಲ್ಲ ಎಂದು ಕಲಾವಿದರು ಹಾಗೂ ತಂತ್ರಜ್ಞರು, ನಿರ್ಮಾಪಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಬಗ್ಗೆ ಧಾರಾವಾಹಿಯ ಕಲಾವಿದರು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಧಾರಾವಾಹಿಯ ನಟಿ ಚೈತ್ರಾ ನೀಡಿರುವ ದೂರಿನಲ್ಲಿ ‘ಕೋರಮಂಗಲ ಟಾಕೀಸ್’ ನಿರ್ಮಾಣ ಸಂಸ್ಥೆಯೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ 30 ದಿನಗಳೊಳಗೆ ಸಂಭಾವನೆ ಪಾವತಿಸಬೇಕಾಗಿತ್ತು. ಆದರೆ ಡಿಸೆಂಬರ್ ತಿಂಗಳ ಎರಡು ದಿನಗಳ ಪಾವತಿ ಹೊರತುಪಡಿಸಿ ಜನವರಿ, ಫೆಬ್ರವರಿ ಮತ್ತು ಮಾರ್ಚ್ 7, 2026ರವರೆಗೆ ಯಾವುದೇ ಹಣ ಸಿಕ್ಕಿಲ್ಲ’ ಎಂದು ಹೇಳಿದ್ದಾರೆ.

ಮಾಜಿ ಬಿಗ್‌ಬಾಸ್ ಸ್ಪರ್ಧಿ ಹಂಸ, ನಟಿ ಚೈತ್ರಾ ನೇತೃತ್ವದಲ್ಲಿ ಯೂನಿಟ್ ಸದಸ್ಯರು ನಾಗರಬಾವಿಯ ‘ತತ್ಸವಿ ಹೋಟೆಲ್’ ಬಳಿ ನಿರ್ಮಾಪಕರನ್ನು ಭೇಟಿಯಾಗಿ ವೇತನ ಪಾವತಿಗೆ ಒತ್ತಾಯಿಸಿದರು. ಆದರೆ ನಿರ್ಮಾಪಕ ಕೋರಮಂಗಲ ಅನಿಲ್ ಹಾಗೂ ಅವರ ಪತ್ನಿ ಸ್ಥಳದಿಂದಲೇ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಹಂಸ ಅವರಿಗೆ ₹3 ಲಕ್ಷಕ್ಕೂ ಹೆಚ್ಚು, ಚೈತ್ರಾ ಅವರಿಗೆ ದೊಡ್ಡ ಮೊತ್ತದ ವೇತನ ಬಾಕಿಯಿದೆ ಎನ್ನಲಾಗಿದೆ. ಇದೇ ವೇಳೆ ಯೂನಿಟ್ ಸದಸ್ಯರಿಗೆ ಸರಿಯಾದ ಆಹಾರವೂ ನೀಡಿಲ್ಲ. ಕೆಲಸದ ವಾತಾವರಣ ಚೆನ್ನಾಗಿ ಇರಲಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ.

ವಸುದೇವ ಕುಟುಂಬ ಧಾರಾವಾಹಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!