ಟಾಲಿವುಡ್ ನಟ ವಿಜಯ್ ದೇವರಕೊಂಡ ಮುಂದಿನ ಚಿತ್ರ ಘೋಷಣೆ ಮಾಡಲಾಗಿದೆ.
ಶೌರ್ಯು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘VDxShouryuv’ ಎಂದು ಟೈಟಲ್ ಇಡಲಾಗಿದೆ. ವೀರಾ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದ ಪೋಸ್ಟರ್ ಕುತೂಹಲ ಮೂಡಿಸಿದೆ.
ಪೋಸ್ಟರ್‌ನಲ್ಲಿ ವಿಜಯ್ ದೇವರಕೊಂಡ ನಾಲ್ಕು ಶ್ವಾನಗಳನ್ನು ಹಿಡಿದು ಕಾಣಿಸಿಕೊಂಡಿದ್ದಾರೆ. ಅವರ ಹಿಂದೆ ಆಯುಧಧಾರಿಗಳ ಗುಂಪು ಕಾಣಿಸಿಕೊಂಡಿದ್ದಾರೆ. “ಈಗ ನೀವು ನೋಡುತ್ತಿರುವ ಸಿಟ್ಟು ಒಂದು ಕಾಲದಲ್ಲಿ ಪ್ರೀತಿ ಆಗಿತ್ತು” ಎಂಬ ಟ್ಯಾಗ್‌ಲೈನ್ ಇಲ್ಲಿದೆ.
‘ಹೌಸ್ ಆಫ್ ದಿ ಡ್ರ್ಯಾಗನ್’ ಮತ್ತು ‘ಫಾಲ್ಔಟ್’ ಪ್ರಾಜೆಕ್ಟ್‌ಗಳಿಗೆ ಕೆಲಸ ಮಾಡಿದ ಅಲೆಜಾಂಡ್ರೊ ಮಾರ್ಟಿನೆಜ್ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದಾರೆ. ‘ಗಾಡ್ಸ್ ಆಫ್ ಈಜಿಪ್ಟ್’, ‘ಬ್ಯಾಟ್‌ಮ್ಯಾನ್ ಫಾರೆವರ್’ ಚಿತ್ರಗಳಲ್ಲಿ ಕೆಲಸ ಮಾಡಿದ ಎರಿಕ್ ಡಸ್ಟರ್ ವಿಎಫ್‌ಎಕ್ಸ್ ಮಾಡುತ್ತಿದ್ದಾರೆ. ‘ಅನಿಮಲ್’ ಮತ್ತು ‘ಓಂ ಶಾಂತಿ ಓಂ’ ಚಿತ್ರಗಳಿಗೆ ಕೆಲಸ ಮಾಡಿದ ಸುರೇಶ್ ಸೆಲ್ವರಾಜನ್ ನಿರ್ಮಾಣ ವಿನ್ಯಾಸಕರಾಗಿದ್ದಾರೆ. ಚಿತ್ರಕ್ಕೆ ಸಂಗೀತ ಹೇಷಮ್ ಅಬ್ದುಲ್ ವಹಾಬ್ ನೀಡಿದ್ದಾರೆ.
ವಿಜಯ್ ದೇವರಕೊಂಡ ಪತ್ನಿ ರಶ್ಮಿಕಾ ಮಂದಣ್ಣ ಜೊತೆ ‘ರಣಬಾಲಿ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಹೊಸ ಸಿನಿಮಾ ಘೋಷಣೆ ಆಗಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.





Be the first to comment