‘ಜನ ನಾಯಗನ್’ ಆನ್‌ಲೈನ್‌ನಲ್ಲಿ ಸೋರಿಕೆ

‘ಜನ ನಾಯಗನ್’ ಚಿತ್ರದ  ದೃಶ್ಯಗಳು ಆನ್‌ಲೈನ್‌ನಲ್ಲಿಹರಿದಾಡಿದ ನಂತರ  ಕೆವಿಎನ್ ಪ್ರೊಡಕ್ಷನ್ಸ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ  ಸೋರಿಕೆಯಾದ ದೃಶ್ಯವನ್ನು ನೋಡುವುದು ಅಪರಾಧ ಎಂದು ಎಚ್ಚರಿಸಿದೆ.

ಸೋರಿಕೆಯಾದ ದೃಶ್ಯವನ್ನು ಡೌನ್‌ಲೋಡ್ ಮಾಡುವುದು, ನೋಡುವುದು, ಸಂಗ್ರಹಿಸುವುದು, ಫಾರ್ವರ್ಡ್ ಮಾಡುವುದು, ಹಂಚುವುದು ಅಥವಾ ಅಪ್‌ಲೋಡ್ ಮಾಡುವುದು ಕ್ರಿಮಿನಲ್ ಅಪರಾಧ  ಆಗುತ್ತದೆ ಎಂದು ತಿಳಿಸಿದೆ.

”ನಾವು KVN ಪ್ರೊಡಕ್ಷನ್ಸ್ LLP, ‘ಜನಾ ನಾಯಕನ್’ ಎಂಬ ಸಿನೆಮಾಟೋಗ್ರಾಫ್ ಚಿತ್ರದ ನಿರ್ಮಾಪಕರು ಹಾಗೂ ವಿಶೇಷ ಕಾಪಿರೈಟ್ ಹಕ್ಕುದಾರರು. ಈ ಚಿತ್ರದ ಕೆಲವು ದೃಶ್ಯಗಳು ಮತ್ತು ಕ್ಲಿಪ್‌ಗಳು, ಕೆಲವೆಡೆ ಬಹುತೇಕ ಸಂಪೂರ್ಣ ಚಿತ್ರವೇ, ನಕಲಿಸಿ ಮತ್ತು ಹರಡಲ್ಪಟ್ಟಿರುವುದು ನಮ್ಮ ಗಮನಕ್ಕೆ ಬಂದಿದೆ. ಇದು ಡಿಜಿಟಲ್ ಪೈರಸಿಗೆ ಗಂಭೀರ ಬೆದರಿಕೆಯನ್ನು ಉಂಟು ಮಾಡುತ್ತಿದೆ.

ಈ ರೀತಿಯ ಸೋರಿಕೆಯಾದ ವಿಷಯವನ್ನು ವಾಟ್ಸ್ಆಪ್, ಟೆಲಿಗ್ರಾಂ, ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಎಕ್ಸ್, ಯೂಟ್ಯೂಬ್, ವೆಬ್‌ಸೈಟ್‌ಗಳು, ಟೋರಂಟ್‌ಗಳು ಅಥವಾ ಯಾವುದೇ ಮಾಧ್ಯಮದ ಮೂಲಕ ಡೌನ್‌ಲೋಡ್ ಮಾಡುವುದು, ನೋಡುವುದು, ಸಂಗ್ರಹಿಸುವುದು, ಫಾರ್ವರ್ಡ್ ಮಾಡುವುದು, ಹಂಚುವುದು ಅಥವಾ ಅಪ್‌ಲೋಡ್ ಮಾಡುವುದು  ಮಿನಲ್ ಅಪರಾಧವಾಗಿದ್ದು, ಕಾಪಿರೈಟ್ ಕಾನೂನುಗಳ ಉಲ್ಲಂಘನೆಯಾಗುತ್ತದೆ,” ಎಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಾಗಿದೆ.

ಪ್ರತಿ ಡಿಜಿಟಲ್ ಚಟುವಟಿಕೆ ಟ್ರೇಸ್ ಮಾಡಬಹುದಾಗಿದೆ. ನಾವು ಈಗಾಗಲೇ ಅಗತ್ಯ ತನಿಖೆಗಳನ್ನು ಪ್ರಾರಂಭಿಸಿದ್ದೇವೆ.ಸಂಬಂಧಪಟ್ಟವರ ವಿರುದ್ಧ ದೂರುಗಳನ್ನು ದಾಖಲಿಸಿದ್ದೇವೆ. ಸೋರಿಕೆಯ ಸರಪಳಿ  ಗುರುತಿಸುವ ಕಾರ್ಯ ನಡೆಯುತ್ತಿದೆ. ಪ್ರತಿಯೊಬ್ಬರ ವಿರುದ್ಧ ಕಠಿಣ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!