ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಮತ್ತು ನಾದಬ್ರಹ್ಮ ಹಂಸಲೇಖ ಜೋಡಿಯನ್ನು ಸ್ಮರಿಸುವ ವಿಶೇಷ ಮೆಗಾ ಇವೆಂಟ್ ‘ಕ್ರೇಜಿ-ಬ್ರಹ್ಮ’ ಕಾರ್ಯಕ್ರಮ ಮೇ 30ರಂದು ಅದ್ದೂರಿಯಾಗಿ ನಡೆಯಲಿದೆ.
ಈ ಸಮಾರಂಭದಲ್ಲಿ ರವಿಚಂದ್ರನ್-ಹಂಸಲೇಖ ಕಾಂಬಿನೇಷನ್‌ನ ಸೂಪರ್ ಹಿಟ್ ಹಾಡುಗಳು, ಡ್ಯಾನ್ಸ್ ಪರ್ಫಾರ್ಮೆನ್ಸ್‌ಗಳು, ನಾಟಕ, ಮಿಮಿಕ್ರಿ, ಏಕವ್ಯಕ್ತಿ ಪ್ರದರ್ಶನಗಳು ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ನೀಡಲಿವೆ. ದಕ್ಷಿಣ ಭಾರತದ ಖ್ಯಾತ ಕಲಾವಿದರು, ಕನ್ನಡ ಚಿತ್ರರಂಗದ ಹೆಸರಾಂತ ನಟ, ನಟಿಯರು ಹಾಗೂ ಪೋಷಕ ಕಲಾವಿದರು ಈ ವಿಶೇಷ ವೇದಿಕೆಯಲ್ಲಿ ಪಾಲ್ಗೊಂಡು ರವಿ-ಹಂಸ ಜೋಡಿಗೆ ಗೌರವ ಸಮರ್ಪಿಸಲಿದ್ದಾರೆ.
ಕಾರ್ಯಕ್ರಮವು ಬೆಂಗಳೂರು -ಮೈಸೂರು ರಸ್ತೆಯ ಕೆಂಗೇರಿ ಬಳಿಯ ‘ಜೆ.ಕೆ ಗ್ರಾಂಡ್ ಅರೇನಾ’ದಲ್ಲಿ ಸಂಜೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಡೆಯಲಿದೆ. ‘ಕ್ರೇಜಿ-ಬ್ರಹ್ಮ’ ಕಾರ್ಯಕ್ರಮಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ವಿ. ರವಿಚಂದ್ರನ್ ಮತ್ತು ಹಂಸಲೇಖ ಜೋಡಿ ಎಂದಿಗೂ ಮರೆಯದ ಸ್ಥಾನವನ್ನು ಪಡೆದಿದೆ. ರವಿಚಂದ್ರನ್ ಅವರ ಕಲ್ಪನೆ, ಹಂಸಲೇಖ ಅವರ ಮಂತ್ರಮುಗ್ಧ ಸಂಗೀತ ಕನ್ನಡ ಸಿನಿರಸಿಕರಿಗೆ ಅನೇಕ ಅಮರ ಗೀತೆಗಳು ಮತ್ತು ಅದ್ಭುತ ಸಿನಿಮಾಗಳನ್ನು ಕೊಟ್ಟಿದೆ.
—–





Be the first to comment