‘ಟಾಕ್ಸಿಕ್’ ಸಿನಿಮಾ ಎದುರು ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಚಿತ್ರ ತೆರೆಗೆ ಬರಲು ರೆಡಿ ಆಗಿದೆ.
ಈ ಬಾರಿ ಈದ್ಗೆ ‘ಮಾತೃಭೂಮಿ’ ರಿಲೀಸ್ ಆಗಬೇಕಿತ್ತು. ಆದರೆ ಸಿನಿಮಾ ರೀಶೂಟ್ ಕಾರಣಕ್ಕೆ ರಿಲೀಸ್ ಮುಂದಕ್ಕೆ ಹೋಯಿತು. ಮೇ 15ರಂದು ಚಿತ್ರ ತೆರೆಗೆ ಬರಲಿದೆ ಎಂದು ಹೇಳಲಾಗಿತ್ತು. ಆದರೆ ಸಿನಿಮಾ ರಿಲೀಸ್ ಜೂನ್ 4ಕ್ಕೆ ಮುಂದಕ್ಕೆ ಹೋಗಿದೆ.
‘ಮಾತೃಭೂಮಿ’ ಚಿತ್ರದ ಟೈಟಲ್ ಹಾಗೂ ಕಥೆ ಬದಲಿಸಿ 40 ದಿನ ಮರುಚಿತ್ರೀಕರಣ ಮಾಡಲಾಗಿದೆ. ಮೇ 15 ಶಾಲಾ-ಕಾಲೇಜಿಗೆ ರಜೆ ಇರುತ್ತದೆ. ಈ ರಜೆಯ ಲಾಭ ಪಡೆಯಲು ಸಲ್ಮಾನ್ ಖಾನ್ ಮುಂದಾಗಿದ್ದರು. ಆದರೆ ಚಿತ್ರ ದಲ್ಲಿ ಕೊಂಚ ಎಡವಟ್ಟಾದರೂ ಭಾರತ ಹಾಗೂ ಚೀನಾ ಸಂಬಂಧ ಹದಗೆಡಬಹುದು. ಹೀಗಾಗಿ ಸೆನ್ಸಾರ್ ಮಂಡಳಿ ವಿಸ್ತೃತವಾಗಿ ಸಿನಿಮಾ ನೋಡುವ ಸಾಧ್ಯತೆ ಇದೆ.
ಸಿನಿಮಾ ಸಂಪೂರ್ಣವಾಗಿ ಸಿದ್ಧಗೊಳ್ಳಲು ಇನ್ನೂ ಸಮಯ ಬೇಕಾಗುತ್ತದೆ. ಸದ್ಯ ಪೋಸ್ಟ್ ಪ್ರೊಕಡ್ಷನ್ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಸದ್ಯದ ಮಟ್ಟಿಗೆ ಸಿನಿಮಾ ಮೇ 15ರಂದು ರಿಲೀಸ್ ಆಗಲು ಸಾಧ್ಯವಾಗುತ್ತಿಲ್ಲ.
ಜೂನ್ 4ರಂದು ‘ಟಾಕ್ಸಿಕ್’ ಸಿನಿಮಾ ಬರುತ್ತಿದೆ. ಈ ಸಂದರ್ಭದಲ್ಲೇ ‘ಮಾತೃಭೂಮಿ’ ರಿಲೀಸ್ ಆಗಬಹುದು ಎಂದು ಹೇಳಲಾಗುತ್ತಾ ಇದೆ. ‘ಟಾಕ್ಸಿಕ್’ ಸಿನಿಮಾ ತನ್ನ ರಿಲೀಸ್ ದಿನಾಂಕವನ್ನು ಜೂನ್ 4ಕ್ಕೆ ಮುಂದೂಡಿ ‘ಧುರಂಧರ್ 2’ ಸಿನಿಮಾ ಮಧ್ಯೆ ಕ್ಲ್ಯಾಶ್ ತಪ್ಪಿದೆ. ಈಗ ‘ಮಾತೃಭೂಮಿ’, ‘ಟಾಕ್ಸಿಕ್’ ಜೊತೆ ಕ್ಲಾಶ್ ಆಗುವ ಸಾಧ್ಯತೆ ಇದೆ.
—-





Be the first to comment