ಮಗಳ ಎಸ್ ಎಸ್ ಎಲ್ ಸಿ ಪರೀಕ್ಷೆ ಸಿದ್ಧತೆಗಾಗಿ ಮಧ್ಯಂತರ ಜಾಮೀನು ಅರ್ಜಿಯನ್ನು ಸಲ್ಲಿಸಿದ ನಟಿ ಪವಿತ್ರಾ ಗೌಡ ಅವರು ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಮುಗಿದಿರುವ ಕಾರಣದಿಂದಾಗಿ ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ.
ಮಗಳ ಪರೀಕ್ಷೆ ಮುನ್ನವೇ ಪರೀಕ್ಷಾ ಸಿದ್ಧತೆಗಾಗಿ ಪವಿತ್ರಾ ಗೌಡ ಅವರು ಮಧ್ಯಂತರ ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ಸಲ್ಲಿಸಿದ ಸಮಯದಿಂದ ವಿಚಾರಣೆ ನಡೆಯುವವರೆಗೆ ಸಾಕಷ್ಟು ಸಮಯ ಕಳೆದಿದೆ. ಮಧ್ಯಂತರ ಜಾಮೀನು ಅರ್ಜಿ ಪಡೆಯುವ ಉದ್ದೇಶ ಈಗ ಮುಗಿದ ಕಾರಣ ಅರ್ಜಿಯನ್ನು ಮುಂದುವರಿಕೆ ಮಾಡುವವರಲ್ಲಿ ಅರ್ಥವಿಲ್ಲ ಎಂದು ಪವಿತ್ರ ಗೌಡ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಇದರಿಂದ ನ್ಯಾಯಪೀಠ ಅರ್ಜಿಯನ್ನು ವಜಾ ಮಾಡಿತು.
ಪವಿತ್ರ ಗೌಡ ಅವರು ದರ್ಶನ್ ಅಭಿಮಾನಿ ಆಗಿದ್ದ ರೇಣುಕಾ ಸ್ವಾಮಿಯನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದಾರೆ. ದರ್ಶನ್ ಈ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರೆದಿದೆ.





Be the first to comment