‘ರಾಮಾಯಣ’ ಚಿತ್ರದ ಡಿಜಿಟಲ್ ಹಕ್ಕುಗಳಿಗಾಗಿ OTT ಸಂಸ್ಥೆಯ ಸುಮಾರು 700 ಕೋಟಿ ರೂಪಾಯಿಗಳ ಡೀಲ್ ನ್ನು ನಿರ್ಮಾಪಕರು ತಿರಸ್ಕರಿಸಿದ್ದಾರೆ.
ನಿರ್ಮಾಪಕ ನಮಿತ್ ಮಲ್ಹೋತ್ರಾ ಚಿತ್ರದ ಪ್ರೀ-ರಿಲೀಸ್ ವ್ಯವಹಾರಗಳನ್ನು ಆರಂಭಿಸಿದ್ದಾರೆ. ‘ರಾಮಾಯಣ’ ಚಿತ್ರದ ಎರಡು ಭಾಗಗಳಿಗೂ ಕನಿಷ್ಠ 1000 ಕೋಟಿ ರೂಪಾಯಿ ಡಿಜಿಟಲ್ ಹಕ್ಕುಗಳ ಮೌಲ್ಯ ನಿರೀಕ್ಷಿಸಲಾಗಿದೆ. ಮೊದಲ ಭಾಗ ಬಿಡುಗಡೆಯಾದ ಬಳಿಕ ಅದರ ಯಶಸ್ಸಿನ ಆಧಾರದ ಮೇಲೆ ಎರಡನೇ ಭಾಗದ ಹಕ್ಕುಗಳನ್ನು ಇನ್ನಷ್ಟು ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡುವ ತಂತ್ರವನ್ನು ನಿರ್ಮಾಪಕರು ರೂಪಿಸಿದ್ದಾರೆ.
ರಣ್ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಅಭಿನಯದ ‘ರಾಮಾಯಣ’ ಪ್ರಾಜೆಕ್ಟ್‌ಗಾಗಿ ಸುಮಾರು 4,000 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಒಟ್ಟು ಬಜೆಟ್ ಭಾರತೀಯ ಸಿನಿಮಾ ಇತಿಹಾಸದಲ್ಲೇ ದಾಖಲೆ ನಿರ್ಮಿಸಿದೆ.
ಭಾರತೀಯ ಸಿನಿಮಾದಇದುವರೆಗಿನ ಅತಿ ದೊಡ್ಡ OTT ಆಫರ್ ಇದಾಗಿದ್ದರೂ, ನಿರ್ಮಾಪಕರ ನಿರೀಕ್ಷೆ ಇದಕ್ಕಿಂತಲೂ ಹೆಚ್ಚಿನದಾಗಿದೆ.
‘ರಾಮಾಯಣ’ ಚಿತ್ರವನ್ನು ನಮಿತ್ ಮಲ್ಹೋತ್ರಾ ಮತ್ತು ಯಶ್ ಸಂಯುಕ್ತವಾಗಿ ನಿರ್ಮಾಣ ಮಾಡುತ್ತಿದ್ದಾರೆ. ರಾಮನಾಗಿ ರಣ್ಬೀರ್ ಕಪೂರ್, ರಾವಣನಾಗಿ ಯಶ್, ಸೀತೆಯಾಗಿ ಸಾಯಿ ಪಲ್ಲವಿ, ಆಂಜನೇಯನಾಗಿ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆ. ಸಿನಿಮಾ ಇದೇ ವರ್ಷದ ದೀಪಾವಳಿ ಹಬ್ಬಕ್ಕೆ ತೆರೆಗೆ ಬರಲಿದೆ.





Be the first to comment