ಮದರ್‌ ಪ್ರಾಮಿಸ್

ಡಾಲಿ ಧನಂಜಯ ಅಭಿನಯದ ಹೊಸ ಸಿನಿಮಾ ‘ಮದರ್‌ ಪ್ರಾಮಿಸ್’‌

ಇತ್ತೀಚಿಗಷ್ಟೇ ‘ಹೆಗ್ಗಣ ಮುದ್ದು’ ಸಿನಿಮಾ ಅನೌನ್ಸ್‌ ಮಾಡಿದ್ದ ಡಾಲಿ ಧನಂಜಯ್‌, ಸದ್ಯ ತಾವೇ ನಟಿಸುತ್ತಿರುವ ಮತ್ತೊಂದು ಹೊಸ ಸಿನಿಮಾವನ್ನ ಘೋಷಣೆ ಮಾಡಿದ್ದಾರೆ… ಟೈಟಲ್‌ ಗೆಸ್‌ ಮಾಡಿ ಅಂತ ಕಳೆದ ಎರಡು ಮೂರು ದಿನಗಳಿಂದ ಸಿನಿಮಾ ಪ್ರೇಮಿಗಳ ತಲೆಗೆ ಹುಳ ಬಿಟ್ಟಿದ್ದ ಟೀಂ ಸದ್ಯ ಸಿನಿಮಾದ ಟೈಟಲ್‌ ರಿವಿಲ್‌ ಮಾಡಿದ್ದಾರೆ.

ಡಾಲಿ ಧನಂಜಯ ಹಾಗೂ ಗೆಳೆಯರು ಸೇರಿ ಮಾಡಿರೋ ಸಿನಿಮಾ ‘ಮದರ್‌ ಪ್ರಾಮಿಸ್’.. ತಮ್ಮದೇ ಸ್ನೇಹಿತರ ಬಳಗವೆಲ್ಲಾ ಸೇರಿಸಿಕೊಂಡು ಸಿನಿಮಾ ಮಾಡಿದ್ದು ಡಾಲಿ ಗೆಳೆಯ ಪೂರ್ಣ ಮೈಸೂರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.. ಡಾಲಿ ಪಿಕ್ಚರ್ಸ್ ಸಹಯೋಗದೊಂದಿಗೆ ಡಾಲಿ ಗೆಳೆಯ ಹರ್ಷ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

ಮದರ್‌ ಪ್ರಾಮಿಸ್

ಕೆಲ ದಿನಗಳ ಹಿಂದಷ್ಟೆ ಸಿನಿಮಾದ ಇಂಟ್ರೆಸ್ಟಿಂಗ್‌ ಪೋಸ್ಟರ್ ಬಿಡುಗಡೆ ಮಾಡಿದ್ದರು. ಪೋಸ್ಟರ್ನಲ್ಲಿ ಯಾರ ಮುಖವನ್ನೂ ತೋರಿಸಿರಲಿಲ್ಲ ಬದಲಿಗೆ ನಟರೆಲ್ಲ ಕ್ಯಾಮೆರಾಗಿ ಹಿಮ್ಮುಖವಾಗಿ ನಿಂತಿದ್ದರು. ಸಿನಿಮಾದ ಹೆಸರನ್ನು ಸಹ ಬೇರೆ ಬೇರೆ ಭಾಷೆಗಳಲ್ಲಿ ನೀಡಲಾಗಿತ್ತು. ಜೊತೆಗೆ ಸಿನಿಮಾದ ಹೆಸರು ಗೆಸ್ ಮಾಡಿ ಎಂಬ ಸವಾಲನ್ನು ಸಹ ಚಿತ್ರತಂಡ ಪ್ರೇಕ್ಷಕರಿಗೆ ನೀಡಿತ್ತು. ಈಗ ಸಿನಿಮಾದಲ್ಲಿ ಅಭಿನಯ ಮಾಡಿರೋ ಪ್ರಮುಖ ಪಾತ್ರಧಾರಿಗಳ ಮುಖಗಳನ್ನ ರಿವಿಲ್‌ ಮಾಡುವುದರ ಜೊತೆಗೆ ಸಿನಿಮಾ ಟೈಟಲ್‌ ಕೂಡ ರಿವಿಲ್‌ ಮಾಡಿದ್ದಾರೆ.

ಮದರ್‌ ಪ್ರಾಮಿಸ್‌ ಇನ್ನುವ ಎಮೋಷನಲ್‌ ಈ ಟೈಟಲ್‌ ಇಟ್ಕೊಂಡು ಎಮೋಷನಲ್‌, ಕಾಮಿಡಿ ಹಾಗೂ ಥ್ರಿಲ್ ಇರೋ ಕಥೆಯನ್ನು ತೆರೆ ಮೇಲೆ ತರ್ತಿದ್ದಾರೆ ನಿರ್ದೇಶಕ ಪೂರ್ಣ.. ಚಿತ್ರದಲ್ಲಿ ಡಾಲಿ ಧನಂಜಯ ಸೇರಿದಂತೆ ನಟ ನಾಗಭೂಷಣ್‌ , ಹಿರಿಯ ನಟಿ ವಿನಯಪ್ರಸಾದ್‌, ಗೀತಾ, ಗುರುದತ್‌ ಇನ್ನು ಅನೇಕರು ಅಭಿನಯ ಮಾಡಿದ್ದಾರೆ… ಫಸ್ಟ್‌ ಲುಕ್‌ ಪೋಸ್ಟರ್‌ ನಲ್ಲಿಯೇ ಬರೋಬ್ಬರಿ 36 ಮುಖ್ಯ ಕಲಾವಿದರನ್ನ ಪರಿಚಯಿಸಿರೋ ಚಿತ್ರತಂಡ ಒಂದೂಳ್ಳೆ ಉತ್ತಮ ಕಂಟೆಂಟ್‌ ಜೂತೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.

ಇನ್ನು ಈ ಸಿನಿಮಾ ಮೂಲಕ ಡಾಲಿ ಧನಂಜಯ ಅವರ ಸ್ನೇಹಿತ ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಾಪಕರಾಗಿ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ.. ನಿರ್ದೇಶನದ ಜವಾಬ್ದಾರಿ ಪೂರ್ಣ ವಹಿಸಿಕೊಂಡಿದ್ದರೆ ‘ಡೇರ್‌ ಡೆವಿಲ್‌ ಮುಸ್ತಾಫ’ ಸಿನಿಮಾ ನಿರ್ದೇಶಕ ಶಶಾಂಕ್‌ ಕ್ರಿಯೇಟಿವ್‌ ಡೈರೆಕ್ಟರ್‌ ಆಗಿ ಕೆಲಸ ಮಾಡಿದ್ದಾರೆ.. ರಾಹುಲ್‌ ರಾಯ್‌ ಕ್ಯಾಮೆರಾ, ನವನೀತ್‌ ಶ್ಯಾಮ್‌ ಸಂಗೀತಾ ನಿರ್ದೇಶನ ಈ ಸಿನಿಮಾಗಿದೆ.

ಮದರ್‌ ಪ್ರಾಮಿಸ್

Be the first to comment

Leave a Reply

Your email address will not be published. Required fields are marked *

Translate »
error: Content is protected !!