‘ನಾವೀಗ ಮೂವರು!’ ಎಂದು ವೀಡಿಯೋ ಹಂಚಿಕೊಂಡ ರಶ್ಮಿಕಾ ಮಂದಣ್ಣ ಹಲವರ ಹುಬ್ಬೇರುವಂತೆ ಮಾಡಿದ್ದಾರೆ!
ಇನ್ಸ್ಟಾಗ್ರಾಂನಲ್ಲಿ ಕಾರ್ಟೂನ್ ರೀಲ್ಸ್ ಪೋಸ್ಟ್ ಮಾಡಿರುವ ರಶ್ಮಿಕಾ ಅವರು, ನಾವೀಗ ಮೂವರು ಎಂದು ಹೇಳಿದ್ದುಹಲವರ ಹುಬ್ಬೇರುವಂತೆ ಮಾಡಿದೆ. ವಿಡಿಯೋದಲ್ಲಿ ರಶ್ಮಿಕಾ ಮತ್ತು ವಿಜಯ್ ಅವರ ಅನಿಮೇಟೆಡ್ ಚಿತ್ರದೊಂದಿಗೆ ಸೂರ್ಯಕಾಂತಿಯ ಚಿತ್ರ ಇದೆ. ರಶ್ಮಿಕಾ ಅವರ ಟಿ-ಶರ್ಟ್ನಲ್ಲಿ ಒಂದು ಮೊಟ್ಟೆಯ ಚಿತ್ರ ಇದೆ. ವಿಡಿಯೋ ನೋಡಿದವರು ನಾನಾ ಕಲ್ಪನೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕೆಲವರು ರಶ್ಮಿಕಾ ಮಂದಣ್ಣ ಗರ್ಭಿಣಿಯಾಗಿದ್ದಾರೆ. ಶೀಘ್ರದಲ್ಲೇ ತಾಯಿಯಾಗುತ್ತಾರೆ ಎಂದು ಹೇಳುತ್ತಿದ್ದಾರೆ.
ಆದರೆ ಪೋಸ್ಟ್ ನ ಅಸಲಿ ಸುದ್ದಿ ಬೇರೆಯೇ ಇದೆ. ರಶ್ಮಿಕಾ ಅನಿಮೇಟೆಡ್ ಪಾತ್ರ ಸೂರ್ಯಕಾಂತಿಯನ್ನು ತಮ್ಮ ಆಪ್ತ ಸ್ನೇಹಿತೆಯೆಂದು ಪರಿಗಣಿಸುತ್ತಾರೆ. ಅದಕ್ಕಾಗಿ ಅವರು ವಿಶೇಷ ಖಾತೆ ರಚಿಸಿದ್ದಾರೆ. ಆ ಖಾತೆಯಲ್ಲಿ ಹೂವಿನೊಂದಿಗೆ ತಮ್ಮ ಸಿಹಿ ಕ್ಷಣಗಳು, ಕಥೆಗಳು, ಅನಿಮೇಟೆಡ್ ಫೋಟೋಗಳು ಮತ್ತು ವಿಡಿಯೋ ಹಂಚಿಕೊಳ್ಳುತ್ತಾರೆ. ಈಗ ವಿಜಯ್ ಅವರನ್ನು ಅನಿಮೇಷನ್ ಜಗತ್ತಿಗೆ ಆಹ್ವಾನಿಸುವ ಮೂಲಕ “ನಾವೀಗ ಮೂವರು” ಎಂದು ಹೇಳಿದ್ದಾರೆ.
‘ರಶ್ಮಿಕಾ ಮತ್ತು ರೂ’ ಟೆರಿಬ್ಲಿ ಟೈನಿ ಟೇಲ್ಸ್’ ಸಂಸ್ಥೆ ರಶ್ಮಿಕಾ ಮಂದಣ್ಣ ಅವರ ಜೊತೆಗೂಡಿ ಸಿದ್ಧಪಡಿಸಿದ ವಿಶೇಷ ಸರಣಿ. ‘ರೂ’ ಪಾತ್ರ ರಶ್ಮಿಕಾ ಮಂದಣ್ಣ ಅವರ ನೈಜ ಗುಣಲಕ್ಷಣಗಳಿಂದ ಪ್ರೇರಿತವಾಗಿದೆ.
—-





Be the first to comment