ಲೈಂಗಿಕ ಕಿರಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಲಯಾಳಂ ಚಿತ್ರರಂಗದ ಹಿರಿಯ ನಿರ್ದೇಶಕ ಹಾಗೂ ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನುಪೊಲೀಸರು ಬಂಧಿಸಿದ್ದಾರೆ.
ನಟಿಯೊಬ್ಬರು ಶೂಟಿಂಗ್ ವೇಳೆ ರಂಜಿತ್ ಕ್ಯಾರವಾನ್‌ಗೆ ಕರೆದು ಲೈಂಗಿಕ ಉದ್ದೇಶದಿಂದ ತಪ್ಪಾಗಿ ನಡೆದುಕೊಂಡಿದ್ದಾರೆ ಎಂದು ದೂರು ದಾಖಲಿಸಿದ್ದರು. ಎರ್ನಾಕುಲಮ್ ಸೆಂಟ್ರಲ್ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ ನಂತರ ರಂಜಿತ್ ಅವರನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.
ಈ ಮೊದಲು ಬೆಂಗಾಳಿ ನಟಿಯೊಬ್ಬರು ರಂಜಿತ್ ಬಾಲಕೃಷ್ಣನ್ ಮೇಲೆ ಲೈಂಗಿಕ ಕಿರುಕುಳದ ಆರೋಪಗಳನ್ನು ಸಲ್ಲಿಸಿದ್ದರು. ತನಿಖೆಯ ನಂತರ ಅವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು.
ರಂಜಿತ್ ಬಾಲಕೃಷ್ಣನ್ ಮೊದಲು ಮೋಹನ್‌ಲಾಲ್ ಜೊತೆ ‘ಸ್ಪಿರಿಟ್’ ಚಿತ್ರ ನಿರ್ದೇಶನ ಮಾಡಿದ್ದರು. ಇವರ ನಿರ್ದೇಶನದ ಹಲವು ಚಿತ್ರಗಳು ಪ್ರಸಿದ್ಧಿ ಪಡೆದಿವೆ.
—-





Be the first to comment