ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ತಮ್ಮ ಪತಿ ಪ್ರೇಮ್ ಅವರೊಂದಿಗೆ ಫೀನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್ ಎಂಬ ಹೊಸ ನಿರ್ಮಾಣ ಸಂಸ್ಥೆಯನ್ನು ಘೋಷಿಸಿದ್ದಾರೆ.
“ನಾವು ಹೊಸ ಪ್ರತಿಭೆಗಳಿಗೆ ವೇದಿಕೆಯನ್ನು ಸೃಷ್ಟಿಸಲು ಬಯಸುತ್ತೇವೆ. ಹೊಸ ಆಲೋಚನೆಗಳನ್ನು ಬೆಂಬಲಿಸುವುದು ಮತ್ತು ಉದ್ಯಮದಲ್ಲಿ ಹೊಸಬರಿಗೆ ಅರ್ಥಪೂರ್ಣ ಅವಕಾಶಗಳನ್ನು ನೀಡುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ ರಕ್ಷಿತಾ.
ತಮ್ಮ ಸಹೋದರ ರಾಣಾ ನಾಯಕನಾಗಿ ನಟಿಸಿರುವ ಮೊದಲ ಪ್ರಾಜೆಕ್ಟ್ ‘ಈಡಿಯಟ್’ ಸಿನಿಮಾವನ್ನು ರಕ್ಷಿತಾ ಘೋಷಿಸಿದ್ದಾರೆ. ಪ್ರೇಮ್ ಅವರೊಂದಿಗೆ ‘ಏಕ್ ಲವ್ ಯಾ’ ಮತ್ತು’ಕೆಡಿ’ ಚಿತ್ರಗಳಲ್ಲಿ ಸಹ-ನಿರ್ದೇಶಕ, ಬರಹಗಾರ, ಗೀತರಚನೆಕಾರರಾಗಿ ಕೆಲಸ ಮಾಡಿದ ಮಂಜುನಾಥ್ ಬಿ.ಎಸ್. ಈ ಸಿನಿಮಾ ನಿರ್ದೇಶಿಸಲಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿದ ಮಂಜುನಾಥ್, ‘ ‘ಈಡಿಯಟ್’ ಪ್ರೀತಿಯ ಬಗೆಗಿನ ಸಿನಿಮಾ ಕಥೆಯಾಗಿದೆ. ಕೆಲವೊಮ್ಮೆ ಪ್ರೀತಿಯು ಒಬ್ಬ ವ್ಯಕ್ತಿಯನ್ನು ‘ಮೂರ್ಖ’ನನ್ನಾಗಿ ಮಾಡಬಹುದು” ಎಂದು ಹೇಳಿದ್ದಾರೆ.
ಚಿತ್ರ ಮೇ ತಿಂಗಳಲ್ಲಿ ಸೆಟ್ಟೇರಲಿದೆ. ಕಿರಿಕ್ ಪಾರ್ಟಿ ಮತ್ತು 777 ಚಾರ್ಲಿ ಚಿತ್ರಗಳಲ್ಲಿ ಕೆಲಸ ಮಾಡಿದ ಅಭಿಜಿತ್ ಮಹೇಶ್, ಈಡಿಯಟ್ಗೆ ಸಂಭಾಷಣೆ ಬರೆಯಲಿದ್ದಾರೆ. ವಿಲಿಯಂ ಡೆವಿಡ್ ಕ್ಯಾಮರಾ ಕೈಚಳಕ, ರೋಮಿಯೋ ಸಂಗೀತ ನೀಡುತ್ತಿದ್ದಾರೆ. ನಿರ್ದೇಶಕ ಮಂಜುನಾಥ್ ಬಿ.ಎಸ್ ಕಥೆ, ನಿರ್ದೇಶಕನಾಗುವುದರ ಜೊತೆಗೆ ಈ ಸಿನಿಮಾಗೆ ಬಂಡವಾಳವನ್ನೂ ಹೂಡುತ್ತಿದ್ದಾರೆ.
—–





Be the first to comment