ಕೋರ್ಟ್ ಮೆಟ್ಟಿಲೇರುವ ಹಂತದಲ್ಲಿ ‘ಲವ್ ಮಾಕ್ಟೇಲ್ 3’ ವಿವಾದ

‘ಲವ್ ಮಾಕ್ಟೇಲ್ 3’ ಚಿತ್ರದ  ‘ಕಥೆ ಕಳ್ಳತನ’ ಎಂದು ಆರೋಪಿಸಿರುವ ನಿರ್ದೇಶಕ ಗುರು ದೇಶಪಾಂಡೆ ಮತ್ತು ರಾಘವೇಂದ್ರ ನಾಯಕ್ ಅವರ ವಿರುದ್ಧ ನಟ ಮತ್ತು ನಿರ್ದೇಶಕ ಡಾರ್ಲಿಂಗ್ ಕೃಷ್ಣ  ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

“ಯಾವುದೇ ಕಾರಣಕ್ಕೂ ನಾನು ಇವರೊಂದಿಗೆ ಕಾಂಪ್ರಮೈಸ್ ಆಗುವುದಿಲ್ಲ. ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವ ಗುರು ದೇಶಪಾಂಡೆ ಮತ್ತು ರಾಘವೇಂದ್ರ ನಾಯಕ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದೇನೆ,” ಎಂದು ಕೃಷ್ಣ ಸ್ಪಷ್ಟಪಡಿಸಿದ್ದಾರೆ.

“ಲವ್ ಮಾಕ್ಟೇಲ್ 3 ಚಿತ್ರದ ಸ್ಕ್ರಿಪ್ಟ್ ಕೆಲಸ ಕಳೆದ 4 ವರ್ಷಗಳಿಂದ ನಡೆಯುತ್ತಿದೆ. ಸ್ಕ್ರೀನ್ ಪ್ಲೇ, ಸಂಭಾಷಣೆ ಅಥವಾ ಪ್ರಮುಖ ದೃಶ್ಯಗಳು ಒಂದೇ ಆಗಿದ್ದರೆ ತೋರಿಸಲಿ. ದಾಖಲೆಗಳಿಲ್ಲದೆ ಸುಮ್ಮನೆ ಮರ್ಯಾದೆ ಹಾನಿ ಮಾಡುವುದು ಸರಿಯಲ್ಲ,” ಎಂದು ಕೃಷ್ಣ ಗುಡುಗಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು (KFCC) ಈ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲ ಮೂಡಿದೆ. ಪ್ರಕರಣ  ಈಗ ಸಂಧಾನದ ಹಂತವನ್ನು ಮೀರಿ ಕೋರ್ಟ್ ಮೆಟ್ಟಿಲೇರಲು ಸಿದ್ಧವಾಗಿದೆ.

ಲವ್ ಮಾಕ್ಟೇಲ್

ಚಿತ್ರದ ವಿಮರ್ಶೆ ಓದಿ👆

ನಿರ್ದೇಶಕ ರಾಘವೇಂದ್ರ ನಾಯಕ್ , 2023ರಲ್ಲಿ ಗುರು ದೇಶಪಾಂಡೆ ಅವರ ಸಮ್ಮುಖದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಸ್ಕ್ರಿಪ್ಟ್ ವಿವರಿಸಿದ್ದರು. ಆ ಕಥೆಯ  ‘ತಂದೆ-ಮಗಳ ಸೆಂಟಿಮೆಂಟ್’, ‘ಕೋರ್ಟ್ ರೂಮ್ ಡ್ರಾಮಾ’ದ ಎಳೆಗಳನ್ನು ಕೃಷ್ಣ ತಮ್ಮ ‘ಲವ್ ಮಾಕ್ಟೇಲ್ 3’ ಚಿತ್ರಕ್ಕೆ ಬಳಸಿಕೊಂಡಿದ್ದಾರೆ ಎಂಬುದು ಆರೋಪವಾಗಿದೆ. ಈ ಬಗ್ಗೆ  ಇಬ್ಬರೂ ನಿರ್ದೇಶಕರು ಮಾಧ್ಯಮಗಳ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!