ನಿರ್ದೇಶಕನ ವಿರುದ್ಧ ಮೋನಾಲಿಸಾ ಆರೋಪ

ಶೂಟಿಂಗ್ ಸಮಯದಲ್ಲಿ ನಿರ್ದೇಶಕ ಸನೋಜ್ ಮಿಶ್ರಾ ಹಲವಾರು ಬಾರಿ ಅವರ ದೇಹದ ಭಾಗಗಳನ್ನು ಸ್ಪರ್ಶಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮೋನಾಲಿಸಾ ಗಂಭೀರ ಆರೋಪ ಮಾಡಿದ್ದಾರೆ.

ಕುಂಭಮೇಳದಿಂದ ಖ್ಯಾತಿ ಪಡೆದ ಮೊನಾಲಿಸಾ ಭೋಸ್ಲೆ ಇತ್ತೀಚೆಗೆ ತಮ್ಮ ಮುಸ್ಲಿಂ ಗೆಳೆಯ ಫರ್ಮಾನ್ ಖಾನ್ ಜೊತೆ ಮದುವೆ ಆದರು. ಮೊನಾಲಿಸಾ ಅವರ ಚೊಚ್ಚಲ ಚಿತ್ರ ‘ದಿ ಡೈರಿ ಆಫ್ ಮಣಿಪುರ’ದ ನಿರ್ದೇಶಕ ಸನೋಜ್ ಮಿಶ್ರಾ ಮದುವೆ ಬಗ್ಗೆ ಆರೋಪ ಮಾಡಿ ಇದು ಲವ್ ಜಿಹಾದ್ ಎಂದಿದ್ದರು. ಈಗ  ಮೊನಾಲಿಸಾ  ನಿರ್ದೇಶಕನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

‘ಸನೋಜ್ ಮಿಶ್ರಾ ಅವರು ಚಲನಚಿತ್ರಗಳ ಹೆಸರಿನಲ್ಲಿ ಅಪ್ರಾಪ್ತ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಅವರ ಹೆಸರನ್ನು ಹೇಳಲು ನನಗೆ ನಾಚಿಕೆಯಾಗುತ್ತದೆ. ಶೂಟಿಂಗ್ ಸಮಯದಲ್ಲಿ ಸನೋಜ್ ಮಿಶ್ರಾ  ದೇಹದ ಭಾಗಗಳನ್ನು ಸ್ಪರ್ಶಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದರು. ನಾನು ಮನೆಯಲ್ಲಿ ಆ   ಬಗ್ಗೆ ಹೇಳಿದಾಗ ಬೆಂಬಲ ಸಿಗಲಿಲ್ಲ. ಅದು ನನ್ನ ಮೊದಲ ಚಿತ್ರ. ನಾನು ಹೊಂದಿಕೊಳ್ಳಬೇಕಾಯಿತು. ನಿರ್ದೇಶಕರು ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಅವರ ಚಲನಚಿತ್ರಗಳಲ್ಲಿ ಅವಕಾಶ ನೀಡುತ್ತಿಲ್ಲ’ ಎಂದು ಅವರು ಆರೋಪಿಸಿದ್ದಾರೆ.

‘ನನಗೆ ಮತ್ತು ನನ್ನ ಪತಿಗೆ ಜೀವ ಬೆದರಿಕೆ ಇದೆ’ ಎಂದು ಆರೋಪಿಸಿ ಮೊನಾಲಿಸಾ ಕೇಂದ್ರ, ಕೇರಳ ಮತ್ತು ಮಧ್ಯಪ್ರದೇಶ ರಾಜ್ಯ ಸರ್ಕಾರಗಳ ಸಹಾಯವನ್ನು ಕೋರಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!