‘ಕಾಣದಂತೆ ಮಾಯವಾದನು’ ಚಿತ್ರದ ಟ್ರೇಲರ್‍ಗೆ ಪುನೀತ್‍ರಾಜಕುಮಾರ್ ಮೆಚ್ಚುಗೆ

ಬ್ಯಾಕ್ ಬೆಂಚರ್ಸ್ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಚಂದ್ರಶೇಖರ್ ನಾಯ್ಡು, ಸೋಮ್ ಸಿಂಗ್ ಹಾಗೂ ಪುಷ್ಪ ಸೋಮ್ ಸಿಂಗ್ ಅವರು ನಿರ್ಮಿಸಿರುವ `ಕಾಣದಂತೆ ಮಾಯವಾದನು` ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರದ ಟ್ರೇಲರ್ ವೀಕ್ಷಿಸಿರುವ ಪವರ್‍ಸ್ಟಾರ್ ಪುನೀತ್ ರಾಜಕುಮಾರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ರಾಜ್ ಪ್ರತಿಪಾಠಿ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಲಿದೆ. ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ.
ಸುeóÁ್ಞನ್ ಅವರ ಛಾಯಾಗ್ರŒಹಣವಿರುವ ಈ ಚಿತ್ರಕ್ಕೆ ವಿಜಯ್ ಗುಮೆನೇನಿ ಸಂಗೀತ ನೀಡಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ವಿನೋದ್ ಸಾಹಸ ನಿರ್ದೇಶನ, ಧನು ನೃತ್ಯ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ, ಉಮೇಶ್ ಹಾಗೂ ಸರವಣ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಈ ಹಿಂದೆ `ಜಯಮ್ಮನ ಮಗ` ಚಿತ್ರವನ್ನು ನಿರ್ದೇಶಿಸಿದ್ದ ವಿಕಾಸ್ ಈ ಚಿತ್ರದ ಮೂಲಕ ನಾಯಕರಾಗಿ ಪಾದಾರ್ಪಣೆ ಮಾಡಿದ್ದಾರೆ. ಸಿಂಧು ಲೋಕನಾಥ್ ಈ ಚಿತ್ರದ ನಾಯಕಿ. ಅಚ್ಯುತಕುಮಾರ್, ವಿನಯಪ್ರಸಾದ್, ಸುಚೇಂದ್ರ ಪ್ರಸಾದ್, ರಾಘವ್ ಉದಯ್, ಭಜರಂಗಿ ಲೋಕಿ, ಧರ್ಮಣ್ಣ, ಸೀತಾ ಕೋಟೆ, ಸನ್ನಿ ಮಹಿಪಾಲ್, ಬಾಬು ಹಿರಣ್ಣಯ್ಯ, ಹೊನ್ನವಳ್ಳಿ ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

This Article Has 1 Comment
  1. Pingback: AWS DevOps

Leave a Reply

Your email address will not be published. Required fields are marked *

Translate »
error: Content is protected !!