ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹೊಸ ಅಪ್‌ಡೇಟ್ ನೀಡಿದ್ದು, ‘ಅಧ್ಯಾಯ 2’ ಆರಂಭವಾಗುತ್ತಿದೆ ಎಂದು ಘೋಷಿಸಿದ್ದಾರೆ.
ಯುಗಾದಿ ಪ್ರಯುಕ್ತ ಪತ್ನಿ ಪ್ರಗತಿ ಜೊತೆ ಕಮಲಶಿಲೆಯ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದ ರಿಷಬ್ ಶೆಟ್ಟಿ ಅವರು, “ಹೊಸ ವರ್ಷ, ಹೊಸ ಚಾಪ್ಟರ್” ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ಘೋಷಣೆ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ‘ಅಧ್ಯಾಯ 2’ ಯಾವ ಚಿತ್ರದ ಮುಂದುವರಿಕೆ ಎನ್ನುವ ಪ್ರಶ್ನೆ ಕೇಳಿ ಬರುತ್ತಿದೆ. ಬಹುತೇಕರು ಇದು ‘ಕಾಂತಾರ’ ಚಿತ್ರದ ಮುಂದಿನ ಭಾಗವಾಗಿರಬಹುದು ಎಂದು ಊಹೆ ಮಾಡುತ್ತಿದ್ದಾರೆ.
ಚಿತ್ರದ ಕಥೆ, ತಾರಾಗಣ ಸೇರಿದಂತೆ ಯಾವುದೇ ಮಾಹಿತಿಯನ್ನು ರಿಷಬ್ ಶೆಟ್ಟಿ ಬಹಿರಂಗಪಡಿಸಿಲ್ಲ. ಆದರೆ ಯುಗಾದಿ ಹಬ್ಬದಂದೇ ಘೋಷಣೆ ನೀಡಿರುವುದು ಅಭಿಮಾನಿಗಳಿಗೆ ಖುಷಿ ತಂದಿದೆ.
‘ಕಾಂತಾರ’ ಚಿತ್ರದ ಭರ್ಜರಿ ಯಶಸ್ಸಿನ ನಂತರ ರಿಷಬ್ ಶೆಟ್ಟಿ ಅವರ ಮುಂದಿನ ಪ್ರಾಜೆಕ್ಟ್ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದೆ. ‘ಅಧ್ಯಾಯ 2’ ಘೋಷಣೆ ಹೊಸ ಚಿತ್ರದ ನಿರೀಕ್ಷೆಗಳನ್ನು ಹೆಚ್ಚಾಗುವಂತೆ ಮಾಡಿದೆ. ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಬಳಿಕ ಪೌರಾಣಿಕ ಶೈಲಿಯ ‘ಜೈ ಹನುಮಾನ್’ ಸಿನಿಮಾದಲ್ಲಿ ರಿಷಬ್ ಶೆಟ್ಟಿ ತೊಡಗಿಸಿಕೊಂಡಿದ್ದಾರೆ.





Be the first to comment