ಪಿ ಸಿ ಶೇಖರ್ ಹೊಸ ಸಿನಿಮಾ ಘೋಷಣೆ

ಯುಗಾದಿ ಹಬ್ಬದ ಸಂಭ್ರಮದ ನಡುವೆ ನಿರ್ದೇಶಕ ಪಿ ಸಿ ಶೇಖರ್  ಹೊಸ ಸಿನಿಮಾವನ್ನು ಘೋಷಿಸಿದ್ದಾರೆ.

‘ರಾಗ’, ‘ರೊಮಿಯೋ’ ಮುಂತಾದ ಸಿನಿಮಾಗಳ ನಿರ್ದೇಶಕ ಪಿಸಿ ಶೇಖರ್  ಈ ಬಾರಿ ದೊಡ್ಡ ಮಟ್ಟದ ಪ್ರಾಜೆಕ್ಟ್‌ಗೆ ಸಜ್ಜಾಗಿದ್ದಾರೆ. ಈ ಸಿನಿಮಾಗೆ ‘ಸಾರಥಿ’,  ‘ಲ್ಯಾಂಡ್‌ಲಾರ್ಡ್’ ಖ್ಯಾತಿಯ ನಿರ್ಮಾಪಕ ಕೆವಿ ಸತ್ಯಪ್ರಕಾಶ್ ಕೈಜೋಡಿಸಿದ್ದಾರೆ.

ಚಿತ್ರಕ್ಕೆ ಎಲ್ಲಾ ಪೂರ್ವ ತಯಾರಿಗಳು ಪೂರ್ಣಗೊಂಡಿವೆ.   ಸಿನಿಮಾ ಸೆಟ್ಟೇರಲು ಮಾತ್ರ ಬಾಕಿಯಿದೆ. ಸದ್ಯ ‘ಮಹಾನ್’ ಸಿನಿಮಾದ ಅಂತಿಮ ಹಂತದ ಚಿತ್ರೀಕರಣದಲ್ಲಿ ನಿರತರಾಗಿರುವ ಪಿಸಿ ಶೇಖರ್, ಆ ಸಿನಿಮಾ ಬಿಡುಗಡೆಗೂ  ಮುನ್ನವೇ ಹೊಸಪ್ರಾಜೆಕ್ಟ್‌ಗೆ ಚಾಲನೆ ನೀಡುತ್ತಿದ್ದಾರೆ.

‘ಶೀಘ್ರದಲ್ಲೇ ಚಿತ್ರದ ಶೀರ್ಷಿಕೆ ಮತ್ತು ಪಾತ್ರವರ್ಗದ ಮಾಹಿತಿ ಬಹಿರಂಗಗೊಳ್ಳಲಿದೆ.  ಇದು ದೊಡ್ಡ ಮಟ್ಟದಲ್ಲಿ ತಯಾರಾಗಲಿರುವ ಸಿನಿಮಾ. ಕೆವಿ ಸತ್ಯಪ್ರಕಾಶ್ ಅವರಂತಹ ನಿರ್ಮಾಪಕರಿಂದ ಅವಕಾಶ ಸಿಕ್ಕಿರುವುದು ಖುಷಿಯ ವಿಷಯ’ ಎಂದು ಪಿ ಸಿ ಶೇಖರ್  ತಿಳಿಸಿದ್ದಾರೆ.

ಈ ಸಿನಿಮಾಗೆ ನಟ-ನಿರ್ಮಾಪಕ ಮಿತ್ರ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ‘ರಾಗ’ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದ ಮಿತ್ರ, ಕ್ಯಾಮೆರಾ ಹಿಂದೆ ಪ್ರಮುಖ ಜವಾಬ್ದಾರಿ ಹೊತ್ತಿದ್ದಾರೆ.

—-

This Article Has 1 Comment

Leave a Reply

Your email address will not be published. Required fields are marked *

Translate »
error: Content is protected !!