ರೇಣುಕಾಸ್ವಾಮಿ ಕೊಲೆ ಪ್ರಕರಣದ ಹೋಲಿಕೆಯಿದೆ ಎನ್ನಲಾಗುತ್ತಿರುವ ‘ಬಾಸ್’ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡಬಾರದು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದಾರೆ.
ಬಿಡುಗಡೆಯಾಗಿರುವ ‘ಬಾಸ್’ ಚಿತ್ರದ ಟೀಸರ್‌ನಲ್ಲಿ ಶೆಡ್, ಮೋರಿ ದೃಶ್ಯಗಳನ್ನು ತೋರಿಸಲಾಗಿದೆ. ಒಬ್ಬ ಸೆಲೆಬ್ರಿಟಿ ಅಪರಾಧ ಪ್ರಕರಣದಲ್ಲಿ ಸಿಲುಕುವ ಕಥಾಹಂದರ ಕಾಣಿಸುತ್ತದೆ. ಆತ ತಾನು ನಿರಪರಾಧಿ ಎಂದು ಹೇಳಿಕೊಳ್ಳುವ ಸನ್ನಿವೇಶಗಳು ರೇಣುಕಾಸ್ವಾಮಿ ಪ್ರಕರಣವನ್ನು ಹೋಲುತ್ತವೆ ಎನ್ನುವ ಚರ್ಚೆ ಆರಂಭವಾಗಿದೆ.
‘ಬಾಸ್’ ಚಿತ್ರವನ್ನು “ನೈಜ ಘಟನೆ ಆಧಾರಿತ” ಎಂದು ಹೇಳಿರುವುದು ವಿವಾದವನ್ನು ಹೆಚ್ಚಿಸಿದೆ. ಪ್ರಕರಣ ಇನ್ನೂ ಕೋರ್ಟ್‌ನಲ್ಲಿ ಇರುವ ಸಂದರ್ಭದಲ್ಲಿ ಇಂತಹ ಕಥಾಹಂದರದ ಸಿನಿಮಾ ನಿರ್ಮಾಣ ಎಷ್ಟು ಸಮಂಜಸ ಎಂಬ ಚರ್ಚೆ ಆರಂಭವಾಗಿದೆ. ಈ ಚಿತ್ರಕ್ಕೆ ನಿರ್ದೇಶನವನ್ನು ಲವ್ ಅವರು ಮಾಡಿದ್ದು, ತನುಷ್ ಶಿವಣ್ಣ ಮತ್ತು ವಂದಿತಾ ಗೌಡ ಅಭಿನಯಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎ2 ಆರೋಪಿಯಾಗಿದ್ದಾರೆ. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು ಪಟ್ಟಣಗೆರೆ ಪ್ರದೇಶದ ಶೆಡ್‌ನಲ್ಲಿ ಕೊಲೆ ಮಾಡಲಾಗಿದೆ. ಈ ವೇಳೆ ದರ್ಶನ್ ಹಾಗೂ ಪವಿತ್ರಾ ಸ್ಥಳದಲ್ಲಿದ್ದರು ಎಂಬ ಆರೋಪ ಇದೆ. ಬಳಿಕ ಶವವನ್ನು ಮೋರಿಯ ಬಳಿ ಬಿಸಾಡಲಾಗಿತ್ತು ಎಂದು ಹೇಳಲಾಗಿದೆ. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.
—-





Be the first to comment