ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ವಿವಾಹ ಆರತಕ್ಷತೆಗೆ ಅತಿಥಿ ಪಟ್ಟಿಯನ್ನು ಕಡಿತಗೊಳಿಸಲಾಗಿದೆ.
‘ವಿರೋಶ್’ ಆರತಕ್ಷತೆ ಮಾರ್ಚ್ 4ರಂದು ಹೈದರಾಬಾದ್ನಲ್ಲಿ ನಡೆಯಲಿದೆ. ಭಾರೀ ಜನದಟ್ಟಣೆ ಮತ್ತು ಸಂಚಾರ ಅಡಚಣೆಗಳ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಬಿಗಿ ಭದ್ರತೆ ಹಾಗೂ ಜನಸಂದಣಿ ನಿಯಂತ್ರಣ ಕ್ರಮಗಳನ್ನು ಅನುಸರಿಸುವಂತೆ ಪೊಲೀಸರು ಸೂಚಿಸಿದ್ದರಿಂದ ಅತಿಥಿ ಪಟ್ಟಿಯನ್ನು ಕಡಿತಗೊಳಿಸಲಾಗಿದೆ.
ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ತೀರ್ಮಾನಕ್ಕೆ ಬಂದಿರುವುದಾಗಿ ದಂಪತಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಕನ್ನಡ ಚಿತ್ರರಂಗದ ಆಯ್ದ ಗಣ್ಯರನ್ನು ಆಹ್ವಾನಿಸುವ ಯೋಜನೆ ಇದ್ದುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೆಲವು ರಾಜಕೀಯ ಮತ್ತು ಆಡಳಿತಾತ್ಮಕ ವ್ಯಕ್ತಿಗಳೂ ಭಾಗವಹಿಸುವ ನಿರೀಕ್ಷೆಯಿತ್ತು. ಆದರೆ ಸುರಕ್ಷತಾ ಕಾರಣಗಳಿಂದ ಅತಿಥಿ ಪಟ್ಟಿಯನ್ನು ಮತ್ತಷ್ಟು ಕಡಿತಗೊಳಿಸಲಾಗಿದೆ. ಈ ನಿರ್ಧಾರವನ್ನು ಪೊಲೀಸರು, ಕಾರ್ಯಕ್ರಮ ಆಯೋಜಕರು ಮತ್ತು ಎರಡೂ ಕುಟುಂಬಗಳು ತೆಗೆದುಕೊಂಡಿರುವುದಾಗಿ ದಂಪತಿ ಸ್ಪಷ್ಟಪಡಿಸಿದ್ದಾರೆ.
“ನಿಮ್ಮ ಸುರಕ್ಷತೆ ಮತ್ತು ಸಂತೋಷವೇ ನಮಗೆ ಮುಖ್ಯ. ವಿವಾಹ ಆರತಕ್ಷತೆ ಸುರಕ್ಷಿತವಾಗಿ ಮತ್ತು ಸಂತೋಷಕರವಾಗಿ ನಡೆಸಲು ನಿಮ್ಮ ಸಹಕಾರ ಅಗತ್ಯ,” ಎಂದು ‘ವಿರೋಶ್’ ಮನವಿ ಮಾಡಿದ್ದಾರೆ.
—–





Be the first to comment