‘ಕೇರಳ ಸ್ಟೋರಿ-2’ ಬಿಡುಗಡೆ ತಡೆ ಆದೇಶ ತೆರವು

‘ದಿ ಕೇರಳ ಸ್ಟೋರಿ-2 ಚಿತ್ರ ಬಿಡುಗಡೆಯ ತಡೆ  ಆದೇಶವನ್ನು ಕೇರಳ ಹೈಕೋರ್ಟ್ ಶುಕ್ರವಾರ ತೆರವುಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಸ್.ಎ. ಧರ್ಮಾಧಿಕಾರಿ ಹಾಗೂ ಪಿ.ವಿ. ಬಾಲಕೃಷ್ಣನ್ ಅವರಿದ್ದ ವಿಭಾಗೀಯ ಪೀಠ, ನ್ಯಾಯಮೂರ್ತಿ ಬೇಚು ಕುರಿಯನ್ ಥೋಮಸ್ ಅವರು  ‘ದಿ ಕೇರಳ ಸ್ಟೋರಿ-2′ ಚಿತ್ರ ಬಿಡುಗಡೆಗೆ 15 ದಿನಗಳ ತಡೆ ನೀಡಿದ್ದ ಆದೇಶಕ್ಕೆ ತಡೆ ನೀಡಿತು. ಗುರುವಾರ ಸಂಜೆ ವಿಚಾರಣೆ ಆರಂಭಿಸಿದ ವಿಭಾಗೀಯ ಪೀಠ ಸುಮಾರು 2 ಗಂಟೆ ವಿಸ್ತೃತ ವಿಚಾರಣೆ ನಡೆಸಿ ಶುಕ್ರವಾರ ಚಿತ್ರ ಬಿಡುಗಡೆಯ ತಡೆ  ಆದೇಶವನ್ನುತೆರವುಗೊಳಿಸಿತು.

ಚಿತ್ರ ನಿರ್ಮಾಪಕ ವಿಪುಲ್ ಅಮೃತಲ್ ಶಾ, ವಿಭಾಗೀಯ ಪೀಠ ನೀಡಿದ್ದ ಆದೇಶದ ವಿರುದ್ಧಗುರುವಾರ ಮೇಲ್ಮನವಿ ಸಲ್ಲಿಸಿದ್ದರು. ಫೆ.27 ರಂದು ಸಿನಿಮಾ ಬಿಡುಗಡೆ ಇರುವುದರಿಂದ ತ್ವರಿತಗತಿಯಲ್ಲಿ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದರು. ಈ ಚಿತ್ರ  ಕೇರಳ  ಅಥವಾ ಯಾವುದೇ ಸಮುದಾಯಕ್ಕೆ ಹಾನಿ  ಅಥವಾ ಅವಹೇಳನ ಮಾಡುವುದಿಲ್ಲ ಎಂದು ಮನವಿಯಲ್ಲಿ ಹೇಳಿದ್ದರು.

”ದಿ ಕೇರಳ ಸ್ಟೋರಿ-2′ ಚಿತ್ರದಲ್ಲಿ ಸಾಮಾಜಿಕ ಅನಿಷ್ಟವನ್ನು ಮಾತ್ರ ಚಿತ್ರಿಸಲಾಗಿದೆ. ಭಾರತದಾದ್ಯಂತ 1,500 ಮತ್ತು ವಿದೇಶಗಳಲ್ಲಿ 300 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. ಚಿತ್ರ ಬಿಡುಗಡೆಗೆ ವಿಳಂಬವಾದಲ್ಲಿ ತೀವ್ರ ಆರ್ಥಿಕ ನಷ್ಟ ಉಂಟಾಗುತ್ತದೆ’ ಎಂದು ಶಾ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!