ಬ್ಲಾಕ್ಬಸ್ಟರ್ ‘ಧುರಂಧರ್’ ಸಿನಿಮಾತಂಡ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ಹಾಲಿವುಡ್ ರಿಪೋರ್ಟರ್ ಇಂಡಿಯಾ ಆಯೋಜಿಸಿದ ಪ್ರಶಸ್ತಿ ಪ್ರದಾನ ಸಮಾರಂಭ ಬಹಿಷ್ಕರಿಸಿ ಎಲ್ಲರ ಗಮನ ಸೆಳೆದಿದೆ.
ಹಾಲಿವುಡ್ ರಿಪೋರ್ಟರ್ ಇಂಡಿಯಾ ಇತ್ತೀಚೆಗೆ ಆಯೋಜಿಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಧುರಂಧರ್’ ಚಿತ್ರಕ್ಕೆ ವಿಶೇಷ ಗೌರವ ಘೋಷಿಸಲಾಗಿತ್ತು. ಆದರೆ ‘ಧುರಂಧರ್’ ಚಿತ್ರತಂಡದ ಯಾರೂ ಸಮಾರಂಭಕ್ಕೆ ಹಾಜರಾಗಲಿಲ್ಲ. ಈ ಗೈರಿಗೆ ಹಳೆಯ ವಿವಾದವೊಂದು ಕಾರಣವಾಗಿದೆ.
‘ಧುರಂಧರ್’ ಚಿತ್ರ ಬಿಡುಗಡೆಯಾದ ವೇಳೆ ಹಾಲಿವುಡ್ ರಿಪೋರ್ಟರ್ ವಿಮರ್ಶಕಿ ಅನುಪಮಾ ಚೋಪ್ರಾ ಅವರು ಚಿತ್ರವನ್ನು ತೀವ್ರವಾಗಿ ಟೀಕಿಸಿದ್ದರು. ‘ಧುರಂಧರ್’ ಚಿತ್ರ ಉದ್ದೇಶಪೂರ್ವಕವಾಗಿ ಪಾಕಿಸ್ತಾನ ವಿರೋಧಿ ನಿರೂಪಣೆಯನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದರು.
ಹಾಲಿವುಡ್ ರಿಪೋರ್ಟರ್ ಇಂಡಿಯಾ ವಿಮರ್ಶೆ ಚಿತ್ರತಂಡದ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಹಾಲಿವುಡ್ ರಿಪೋರ್ಟರ್ ಇಂಡಿಯಾ ಸಂಸ್ಥೆ ನೀಡಿದ ಪ್ರಶಸ್ತಿಯನ್ನು ಬಹಿಷ್ಕರಿಸುವ ಮೂಲಕ ‘ಧುರಂಧರ್’ ತಂಡ ತಿರುಗೇಟು ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ನಡೆ ಚರ್ಚೆಗೆ ಗ್ರಾಸವಾಗಿದೆ.
‘ ಧುರಂಧರ್ 2 ‘ ಸಿನಿಮಾ ಮಾರ್ಚ್ 19ರಂದು ಬಿಡುಗಡೆಯಾಗಲಿದೆ. ಈ ಸೀಕ್ವೆಲ್ಗೆ ಹಾಲಿವುಡ್ ರಿಪೋರ್ಟರ್ ಇಂಡಿಯಾ ಯಾವ ರೀತಿಯ ವಿಮರ್ಶೆ ನೀಡಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ‘ಧುರಂಧರ್’ ಸಿನಿಮಾತಂಡ ಪ್ರಶಸ್ತಿ ಪ್ರದಾನ ವೇದಿಕೆಗೆ ಏರದೆ ಇದ್ದದ್ದು ಗಮನ ಸೆಳೆದಿದೆ.
—-





Be the first to comment