ಪುನೀತ್ ರಾಜ್ಕುಮಾರ್, ದರ್ಶನ್ ಸೇರಿದಂತೆ ಹಲವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಬಹಿರಂಗವಾಗಿ ಕ್ಷಮೆ ಕೋರಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಎದುರು ಶ್ರೀನಿವಾಸ್ ಅವರು ಕ್ಷಮೆ ಕೇಳಿದ್ದಾರೆ. “ಆರ್ಥಿಕ ಸಂಕಷ್ಟ, ಸಿನಿಮಾದ ಬಿಡುಗಡೆಯ ಒತ್ತಡದಲ್ಲಿ ತಿಳಿಯದೆ ಮಾತನಾಡಿದ್ದೇನೆ. 7 ಕೋಟಿ ಕನ್ನಡಿಗರು ನನ್ನನ್ನು ಕ್ಷಮಿಸಿ” ಎಂದಿದ್ದಾರೆ.
‘ಕಾಟನ್ಪೇಟೆ ಗೇಟ್ ಸಿನಿಮಾ ಗೋಷ್ಠಿಯಲ್ಲಿ ಎಮೋಷನಲ್ ಆಗಿ ಕೆಲ ವಿಚಾರಗಳನ್ನ ಮಾತನಾಡಿಬಿಟ್ಟೆ. ನನ್ನ ‘ಕಾಟನ್ಪೇಟೆ ಗೇಟ್’ ಸಿನಿಮಾ ರಿಲೀಸ್ ಆಗಬೇಕಿತ್ತು. ಹಣದ ಅವಶ್ಯಕತೆ ಇತ್ತು. ಹಾಗಾಗಿ ತುಂಬ ದುಃಖದಿಂದ ಮಾತನಾಡಿಬಿಟ್ಟೆ. ಆ ಮಾತುಗಳನ್ನೆಲ್ಲಾ ನಾನು ವಾಪಾಸ್ ತೆಗೆದುಕೊಳ್ಳುತ್ತಿದ್ದೇನೆ’ ಎಂದರು.
‘ರಾಜ್ಕುಮಾರ್ ಅವರ ಮೇಲೆ ನನಗೆ ತುಂಬಾ ಅಭಿಮಾನ ಇದೆ. ಪುನೀತ್ ಸರ್ ದೇವರು. ನಾನು ಅವರ ಜೊತೆ ಸಿನಿಮಾ ಮಾಡೋಕ್ಕಿಂತ ಮುಂಚೆ ಒಡನಾಟ ಇತ್ತು. ಶಿವರಾಜ್ಕುಮಾರ್ ಅವರು ಎಷ್ಟೋ ಸಹಾಯ ಮಾಡಿದ್ದಾರೆ. ಅವರ ಉಪಕಾರ ಯಾವತ್ತೂ ಮರೆಯೋದಿಲ್ಲ. ನಾನು ವಿದ್ಯಾವಂತ ಅಲ್ಲ. ಮನಸ್ಸಲ್ಲಿ ಏನಿತ್ತೋ ಅದನ್ನ ಹೇಳಿಬಿಟ್ಟಿದ್ದೀನಿ. ಶಿವಣ್ಣ ದಯವಿಟ್ಟು ನಿಮಗೆ ಕೈಮುಗಿದು ಕೇಳಿಕೊಳ್ಳುತ್ತೇನೆ, ನಿಮ್ಮ ಜೊತೆ ನಾನಿನ್ನೂ ಸಿನಿಮಾ ಮಾಡ್ಬೇಕು.ತಪ್ಪಾಗಿ ಮಾತನಾಡಿದ್ರೆ ದಯವಿಟ್ಟು ಕ್ಷಮಿಸಿ’ ಎಂದರು.
‘ದರ್ಶನ್ ಅವರಿಗೆ ಹಣ ಕೇಳಿದ್ದೆ. ಸ್ವಲ್ಪ ಕಾಲಾವಕಾಶ ಕೊಡಿ ನಾನು ಕೊಡ್ತೀನಿ ಅಂತ ಹೇಳಿದ್ರು. ದರ್ಶನ್ ನಮ್ಮ ಮಾಸ್ ಹೀರೋ. ಅವರ ಜೊತೆ ಸಿನಿಮಾ ಮಾಡುತ್ತೇನೆ. ನನಗೆ ದರ್ಶನ್ ಅವರು ದುಡ್ಡು ಕೊಡಬೇಕಿತ್ತು. ಧ್ರುವ ಸರ್ಜಾ ಜೊತೆ ಮೂರು ಸಿನಿಮಾ ಮಾಡಿದ್ದೇನೆ. ಕಲಾವಿದರು ಇಲ್ಲದೇ ಸಿನಿಮಾಗಳನ್ನು ಮಾಡಲು ಸಾಧ್ಯವಿಲ್ಲ. ನಮಗೆ ಕಲಾವಿದರು ಬೇಕೇ ಬೇಕು. ದಯವಿಟ್ಟು ಕಾಲ್ಶೀಟ್ ಕೊಡಿ. ಒಳ್ಳೆಯ ಡೈರೆಕ್ಟರ್ ಕರೆದುಕೊಂಡು ಬರುತ್ತೇವೆ. ಜೋಗಿ ಪ್ರೇಮ್, ಎ. ಪಿ. ಅರ್ಜುನ್ ಅವರು ಸಿನಿಮಾ ಮಾಡಿ ಕೊಡಲು ಒಪ್ಪಿಕೊಂಡಿದ್ದಾರೆ. ನನಗೆ ದುಡ್ಡು ಬೇಡ. ಸಿನಿಮಾ ಮಾಡಿಕೊಡಿ. ನೀವೆಲ್ಲಾ ಸಹಕರಿಸಿ’ ಎಂದರು.

—–





Be the first to comment