ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ಪೂರ್ಣ ಪ್ರಮಾಣದಲ್ಲಿ ಸಿನಿಮಾವನ್ನು ನಿರ್ದೇಶಿಸಲು ಸಜ್ಜಾಗಿದ್ದಾರೆ.
ಹಾಸ್ಯ ಪ್ರಧಾನ ಕಿರುಚಿತ್ರಗಳು ಮತ್ತು ರಿಯಾಲಿಟಿ ಶೋಗಳ ಮೂಲಕ ಉತ್ತಮ ನಟ ಎಂಬುದನ್ನು ಸಾಬೀತುಪಡಿಸಿರುವ ಗಿಲ್ಲಿ ಈಗ ನಿರ್ದೇಶನದತ್ತ ದೊಡ್ಡ ಹೆಜ್ಜೆ ಇಡಲು ತೀರ್ಮಾನಿಸಿದ್ದಾರೆ. ಈಗಾಗಲೇ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿ ಗಮನ ಸೆಳೆದಿರುವ ಗಿಲ್ಲಿ ವಿವಿಧ ಉತ್ಸವಗಳು, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಅಭಿಮಾನಿ ಸಮಾಗಮಗಳ ಕಾರ್ಯಕ್ರಮಗಳು ಮುಗಿದ ಬಳಿಕ ಸ್ಕ್ರಿಪ್ಟ್ ಬರವಣಿಗೆಗೆ ಕುಳಿತುಕೊಳ್ಳಲಿದ್ದಾರೆ. ಸಿನಿಮಾ ಕಥೆ ಈಗಾಗಲೇ ಸಿದ್ಧವಾಗಿದೆ ಎಂಬ ಮಾಹಿತಿ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ.
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಪೂರ್ಣಗೊಂಡು ತಿಂಗಳಾದರೂ ಅವರ ಜನಪ್ರಿಯತೆಯ ಗ್ರಾಫ್ ಮಾತ್ರ ಇಳಿಮುಖವಾಗಿಲ್ಲ. ಅಭಿಮಾನಿಗಳು ಅವರನ್ನು ಸುತ್ತುವರಿದು ಸೆಲ್ಫಿ, ಮಾತುಕತೆ ಹಾಗೂ ಶುಭಾಶಯಗಳಿಂದ ಕೊಂಡಾಡುತ್ತಿದ್ದಾರೆ. ತಮ್ಮನ್ನು ಭೇಟಿ ಮಾಡಲು ಬರುವ ಪ್ರತಿಯೊಬ್ಬ ಅಭಿಮಾನಿಯೊಂದಿಗೆ ಗಿಲ್ಲಿ ಆತ್ಮೀಯವಾಗಿ ಮಾತನಾಡುತ್ತಿರುವುದು ಅವರ ಇಮೇಜ್ನ್ನು ಮತ್ತಷ್ಟು ಬಲಪಡಿಸಿದೆ.
ನಿರ್ದೇಶನ, ನಟನೆಗಿಂತ ಹೆಚ್ಚು ಸವಾಲಿನ ಕೆಲಸ ಎಂಬುದನ್ನು ಒಪ್ಪಿಕೊಂಡಿರುವ ಗಿಲ್ಲಿ, ಸಿನಿಮಾದಲ್ಲಿ ಆರಂಭದಿಂದ ಅಂತ್ಯದವರೆಗೆ ಜವಾಬ್ದಾರಿ ಹೊರುವ ನಿರ್ಧಾರ ಮಾಡಿದ್ದಾರೆ.

—–





Be the first to comment