ವಿಜಯ್ ರಾಘವೇಂದ್ರ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಫೆಬ್ರವರಿ 20ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.
ದೇವಿ ಪ್ರಸಾದ್ ಶೆಟ್ಟಿ ನಿರ್ದೇಶನದ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ‘ಸೀತಾರಾಮ್ ಬಿನೋಯ್: ಕೇಸ್ ನಂ 18’ ಮುಂದುವರಿದ ಭಾಗವಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟು ಹಾಕಿದೆ.
ಚಿತ್ರವನ್ನು ಫ್ಲೈಯಿಂಗ್ ಎಲಿಫೆಂಟ್ ಸ್ಟೋರಿಟೆಲ್ಲರ್ಸ್ ಬ್ಯಾನರ್ ಅಡಿಯಲ್ಲಿ ದೇವಿ ಪ್ರಸಾದ್ ಶೆಟ್ಟಿ ಮತ್ತು ಸಾತ್ವಿಕ್ ಹೆಬ್ಬಾರ್ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಗೋಪಾಲ ಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿದ್ದಾರೆ. ಹೇಮಂತ್ ಆಚಾರ್ಯ ಅವರ ಛಾಯಾಗ್ರಹಣ, ನವನೀತ್ ಶ್ಯಾಮ್ ಅವರ ಸಂಗೀತ ಸಂಯೋಜನೆ ಇದೆ.
‘ಕೇಸ್ ಆಫ್ ಕೊಂಡಾನ ನಂತರ ಚಿತ್ರತಂಡ ಸೀತಾರಾಮ್ ಜೊತೆಗೆ ಮರಳಿದೆ. ಈ ಚಿತ್ರವು ತಂಡದ ಸಾಮೂಹಿಕ ಉತ್ಸಾಹದಿಂದ ರೂಪುಗೊಂಡಿದೆ. ನವನೀತ್ ಶ್ಯಾಮ್ ಅವರ ಸಂಗೀತ ಚಿತ್ರದ ಮನಸ್ಥಿತಿಯನ್ನು ಕಟ್ಟಿಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ’ ಎಂದು ವಿಜಯ್ ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿರ್ದೇಶಕ ಮತ್ತು ನಿರ್ಮಾಪಕ ಪವನ್ ಒಡೆಯರ್ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ವನ್ನು ಪ್ರಸ್ತುತಪಡಿಸಲು ಮುಂದೆ ಬಂದಿದ್ದಾರೆ.





Be the first to comment