ಶ್ರೀಮಂತರು ಹಾಗೂ ಪ್ರಭಾವಿಗಳಿಗಾಗಿ ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ದುರುಪಯೋಗಕ್ಕೆ ಒಳಪಡಿಸಿದ್ದ ಎಪ್ಸ್ಟೀನ್ ನ ಅಪರಾಧ ಜಾಲಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ಪುಟಗಳ ದಾಖಲೆಗಳ ‘ಎಪ್ಸ್ಟೀನ್ ಫೈಲ್ಸ್’ ನಲ್ಲಿ ಭಾರತದ ಸೆಲೆಬ್ರಿಟಿಗಳ ಹೆಸರುಗಳು ಕಾಣಿಸಿಕೊಂಡಿವೆ.
ನಟಿ ಐಶ್ವರ್ಯಾ ರೈ, ನಟ ಅಭಿಷೇಕ್ ಬಚ್ಚನ್ , ನಟಿ ನಂದಿತಾ ದಾಸ್, ನಿರ್ದೇಶಕ ಅನುರಾಗ್ ಕಶ್ಯಪ್ ಹೆಸರುಗಳು ದಾಖಲೆಗಳಲ್ಲಿ ಪ್ರಸ್ತಾಪವಾಗಿವೆ ಎಂಬ ಮಾಹಿತಿ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ದಾಖಲೆಗಳಲ್ಲಿ ಭಾರತದ ಕೆಲವು ಸೆಲೆಬ್ರಿಟಿಗಳ ಹೆಸರುಗಳು ಉಲ್ಲೇಖವಾಗಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ.
“ನನಗೂ ಎಪ್ಸ್ಟೀನ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅನೇಕ ಕಾರ್ಯಕ್ರಮಗಳಿಗೆ ಆಹ್ವಾನ ಬರುತ್ತದೆ. ಬಹುತೇಕ ಆಹ್ವಾನಗಳಿಗೆ ನಾನು ಪ್ರತಿಕ್ರಿಯಿಸುವುದೇ ಇಲ್ಲ” ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಸ್ಪಷ್ಟನೆ ನೀಡಿದ್ದಾರೆ.
ಜೆಫ್ರಿ ಎಪ್ಸ್ಟೀನ್ ಪ್ರಭಾವಿ ವ್ಯಕ್ತಿಯಾಗಿದ್ದ ಕಾರಣ, ವಿವಿಧ ಕಾರ್ಯಕ್ರಮಗಳು, ಸಭೆಗಳು ಮತ್ತು ಸಂಪರ್ಕಗಳ ಹಿನ್ನೆಲೆಯಲ್ಲಿ ಹಲವರ ಹೆಸರುಗಳು ದಾಖಲೆಗಳಲ್ಲಿ ಕಾಣಿಸಿಕೊಳ್ಳಬಹುದು. ಪ್ಸ್ಟೀನ್ ಫೈಲ್ಸ್‌ನಲ್ಲಿ ಹೆಸರು ಉಲ್ಲೇಖವಾಗಿದೆ ಎಂಬುದೇ ಅಪರಾಧಕ್ಕೆ ಸಾಕ್ಷಿ ಎನ್ನುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಜೆಫ್ರಿ ಎಪ್ಸ್ಟೀನ್ ದಾಖಲೆಗಳ ಬಹಿರಂಗ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.
—–





Be the first to comment