ಕರಿಕಾಡ

‘ಕರಿಕಾಡ’ ರಗಡ್ ಟ್ರೇಲರ್ ಬಿಡುಗಡೆ

ರಿದ್ದಿ ಎಂಟರ್ ಟೈನ್ ಮೆಂಟ್ಸ್ ಅಡಿ ಕಾಡ ನಟರಾಜ್ ಕಥೆ ಬರೆದು ನಿರ್ಮಾಣ ಮಾಡಿರುವ ಚಿತ್ರ ‘ಕರಿಕಾಡ’. ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರೆವೇರಿತು. ತನ್ನ ಕಂಟೆಂಟ್, ಮೇಕಿಂಗ್ ಮೂಲಕವೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರಕ್ಕೆ ಕೆ.ವೆಂಕಟೇಶ್ ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.

ಈಗಾಗಲೇ ತನ್ನ ಟೀಸರ್, ಹಾಡುಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದ ‘ಕರಿಕಾಡ’ ಚಿತ್ರದ ಟ್ರೇಲರ್ ಕೂಡ ಎಲ್ಲಾ ಕಡೆ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ. ‘ಜಗತ್ತಿನಲ್ಲಿ ಯುದ್ಧ ಅಂತ ಶುರು ಆಗೋದು ಒಂದು ಹೆಣ್ಣಿಗೆ ಇನ್ನೊಂದು ಮಣ್ಣಿಗೆ’ ಎಂಬ ಡೈಲಾಗ್ ಸೇರಿದಂತೆ ಹಲವು ವಿಶೇಷತೆಗಳು ಈ ಟ್ರೇಲರ್ ನಲ್ಲಿವೆ.

ಕರಿಕಾಡ

ವೇದಿಕೆಯಲ್ಲಿ ಮಾತನಾಡಿದ ನಾಯಕ ಕಾಡ ನಟರಾಜ್, ‘ ನಾನು ಮತ್ತು ನಿರ್ದೇಶಕ‌ ಕೆ. ವೆಂಕಟೇಶ್ ಸೇರಿ ಈ ಸಿನಿಮಾ ಜರ್ನಿ ಶುರು ಮಾಡಿದೆವು. ಚಿತ್ರದ 7 ಹಾಡುಗಳೂ ಅದ್ಭುತವಾಗಿವೆ. ಆ ಪೈಕಿ ರತುನಿ ಸಾಂಗ್ ಬಿಟ್ಟು ಆರು ಹಾಡನ್ನೂ ನಿರ್ದೇಶಕರೇ ಬರೆದಿದ್ದಾರೆ. ಬ್ಯಾಗ್ರೌಂಡ್ ಸ್ಕೋರ್ ಚಿತ್ರಕ್ಕೆ ಶಕ್ತಿ ತುಂಬಿದೆ. ನಮ್ಮ ಚಿತ್ರ ಪ್ರೇಕ್ಷಕರನ್ನು ರಂಜಿಸಿ ಅಳಿಸುತ್ತದೆ ಎಂಬ ವಿಶ್ವಾಸವಿದೆ. ಒರಿಜಿನಲ್ ಚಾಯ್ಸ್ ನಮಗೆ ಸಪೋರ್ಟ್ ಮಾಡುತ್ತಿದ್ದಾರೆ. ಐದು ಭಾಷೆಯಲ್ಲಿ ಚಿತ್ರ ತಯಾರಾಗಿದ್ದು, ಕನ್ನಡ, ತಮಿಳು, ಮಲಯಾಳಂ ರೆಡಿ ಇದೆ.ತೆಲುಗು ಮತ್ತು ಹಿಂದಿ ಬಾಷೆಯ ಚಿತ್ರ ಸೆನ್ಸಾರ್ ಆಗಬೇಕಿದ್ದು ವಾರದ ನಂತರ ರಿಲೀಸ್ ಮಾಡುತ್ತೇವೆ. ಕನ್ನಡ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಫೆ.6ರಂದು ರಿಲೀಸ್ ಆಗಲಿದೆ. ಈಗಾಗಲೇ ಕರ್ನಾಟಕದಲ್ಲಿ 100 ಥಿಯೇಟರ್ ಕನ್ ಫರ್ಮ್ ಆಗಿವೆ. ನಮ್ಮ ಚಿತ್ರಕ್ಕೆ ಬ್ರ್ಯಾಂಡ್ ಕಂಪನಿಗಳು ತುಂಬಾ ಸಪೋರ್ಟ್ ಮಾಡಿವೆ. ಕಂಟೆಂಟ್ ಮೇಲೆ ನಮಗೆ 100% ನಂಬಿಕೆಯಿದೆ, ಉಳಿದಂತೆ ಪ್ರೇಕ್ಷಕರೇ ಗೆಲ್ಲಿಸಬೇಕು ಎಂದು ಹೇಳಿದರು.

ಚಿತ್ರದ ನಿರ್ಮಾಪಕಿ ದೀಪ್ತಿ ದಾಮೋದರ ಮಾತನಾಡಿ ಚಿತ್ರದ ಪ್ರೊಡ್ಯೂಸರ್ ನಾನೇ ಆದರೂ ಇನ್ನೂ ಸಿನಿಮಾ ನೋಡಿಲ್ಲ. ನಿಮ್ಮ ಜತೆ ನೋಡಲು ನಾನೂ ಕಾಯುತ್ತಿದ್ದೇನೆ ಎಂದರು.

ಕರಿಕಾಡ

ನಿರ್ದೇಶಕ ಕೆ. ವೆಂಕಟೇಶ್ ಮಾತನಾಡಿ, ಈ ಸಿನಿಮಾ ಹಬ್ಬದೂಟದ ತರ.‌ ಈಗಾಗಲೇ ಸೆನ್ಸಾರ್ ಆಗಿದ್ದು u/a ಸಿಕ್ಕಿದೆ. ಸಿನಿಮಾ ಮೇಲೆ ನಮಗೆ ಪೂರ್ತಿ ನಂಬಿಕೆ ಇದೆ ಎಂದರು. ನಾಯಕಿ ನಿರೀಕ್ಷಾ ಶೆಟ್ಟಿ ಮಾತನಾಡಿ ‘ನಾನಿಲ್ಲಿ ತಂಗಾಳಿ ಆಗಿ ಬರ್ತೀನಾ, ಬಿರುಗಾಳಿ ಆಗಿರುತ್ತೇನಾ ಎಂದು ಚಿತ್ರದಲ್ಲೇ ನೋಡಿ. ಹಳ್ಳಿ ಹುಡುಗಿಯ ಪಾತ್ರ ಮಾಡೋದು ಚಾಲೆಂಜ್ ಆಗಿತ್ತು. ಹಳ್ಳಿ ಸೊಗಡಿಗೆ ಹೊಂದಿಕೊಳ್ಳಲು ಕಷ್ಟ ಆಯ್ತು’ ಎಂದರು.

ರಿದ್ಧಿ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ಈ ಚಿತ್ರವನ್ನು ಕಾಡ ನಟರಾಜ್ ಅವರ ಪತ್ನಿ ದೀಪ್ತಿ ದಾಮೋದರ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಶಶಾಂಕ್ ಶೇಷಗಿರಿ ಹಾಗೂ ಅತಿಶಯ್ ಜೈನ್ ಅವರ ಸಂಗೀತವಿದೆ. ವೇದಿಕೆಯಲ್ಲಿ ಸಂಗೀತ ನಿರ್ದೇಶಕರು ಸೇರಿದಂತೆ ನಟರಾದ ಯಶ್ ಶೆಟ್ಟಿ, ವಿಜಯ್ ಚಂಡೂರ್, ಬೇಬಿ ರಿದ್ಧಿ, ರಶ್ಮಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ಚಿತ್ರದಲ್ಲಿ ನಾಯಕ ಯಾವುದಕ್ಕೆ ಯುದ್ಧ ಮಾಡುತ್ತಾನೆ ಎಂದು ಸಿನಿಮಾದಲ್ಲೇ ನೋಡಬೇಕು.

ಕರಿಕಾಡ

Be the first to comment

Leave a Reply

Your email address will not be published. Required fields are marked *

Translate »
error: Content is protected !!