‘ನನ್ನ ಮಗ ವಿಜಯ್ ಗೆ ಬ್ಲಾಕ್ಮೇಲ್ ಬೇಡ. ವಿಜಯ್ ರಾಜಕೀಯ ಸವಾಲುಗಳನ್ನು ಎದುರಿಸಲು ಸಂಪೂರ್ಣವಾಗಿ ಬದ್ಧನಾಗಿದ್ದಾನೆ. ಆದರೆ ಸಿನಿಮಾವನ್ನು ರಾಜಕೀಯವಾಗಿ ಬ್ಲಾಕ್ಮೇಲ್ ಮಾಡಲು ಬಳಸಿಕೊಳ್ಳಬೇಡಿ’ ಎಂದು ವಿಜಯ್ ತಂದೆ ಹಾಗೂ ಹಿರಿಯ ನಿರ್ದೇಶಕ ಎಸ್.ಎ. ಚಂದ್ರಶೇಖರ್ ಕಿಡಿಕಾರಿದ್ದಾರೆ.
ವಿಜಯ್ ಯಾವುದಕ್ಕೂ ಹೆದರೋ ವ್ಯಕ್ತಿಯಲ್ಲ. 60 ವರ್ಷಕ್ಕೂ ಹೆಚ್ಚು ಕಾಲ ತಮಿಳುನಾಡನ್ನು ದ್ರಾವಿಡ ಪಕ್ಷಗಳು ಆಳಿವೆ. ವಿಜಯ್ ರಾಜಕೀಯಕ್ಕೆ ಪ್ರವೇಶಿಸಿರುವುದರಿಂದ ಸ್ಥಾಪಿತ ಪಕ್ಷಗಳಿಗೆ ಭಯ ಉಂಟಾಗಿದೆ. ಮಹಿಳೆಯರು ಮತ್ತು ಯುವಜನತೆ ವಿಜಯ್ ಪರವಾಗಿ ಸ್ಪಷ್ಟ ಮನೋಭಾವ ಹೊಂದಿದ್ದಾರೆ. ಸರ್ಕಾರದ ನಗದು ಸ್ವೀಕರಿಸುತ್ತೇವೆ, ಆದರೆ ಮತ ಮಾತ್ರ ವಿಜಯ್ಗೆ” ಎಂಬ ಮನಸ್ಥಿತಿ ಮಹಿಳಾ ಮತದಾರರಲ್ಲಿ ಹೆಚ್ಚಾಗಿದೆ ಎಂದು ಎಂದು ಅವರು ಹೇಳಿದ್ದಾರೆ.
“ತಮಿಳುನಾಡಿನಲ್ಲಿ ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕಲಾಗುತ್ತಿದೆ. ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ತನ್ನ ಸ್ವರೂಪವನ್ನು ಕಳೆದುಕೊಂಡಿದೆ. ವಿಜಯ್ಗೆ ಬೆಂಬಲ ನೀಡಿದರೆ ಕಾಂಗ್ರೆಸ್ ಪುನಶ್ಚೇತನ ಸಾಧ್ಯ. ವಿಜಯ್ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಚುನಾವಣೆಯನ್ನು ಎದುರಿಸಲು ಜನರು ಪ್ರೇರೇಪಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ವಿಜಯ್ ಅವರ ವೃತ್ತಿಜೀವನದ ಕೊನೆಯ ಸಿನಿಮಾ ‘ಜನ ನಾಯಗನ್’ ಗೆ ಸೆನ್ಸಾರ್ ಮಂಡಳಿ ಪ್ರಮಾಣಪತ್ರ ನೀಡದಿರುವುದರಿಂದ ಚಿತ್ರದ ಬಿಡುಗಡೆ ವಿಳಂಬವಾಗಿದೆ.
—–





Be the first to comment