ಲ್ಯಾಂಡ್ ಲಾರ್ಡ್

Movie Review: ಸಮಾನತೆಗಾಗಿ ‘ಲ್ಯಾಂಡ್ ಲಾರ್ಡ್’ ವಿರುದ್ಧ ಹೋರಾಟ

ಚಿತ್ರ: ಲ್ಯಾಂಡ್ ಲಾರ್ಡ್
ನಿರ್ದೇಶನ: ಜಡೇಶ್ ಹಂಪಿ
ತಾರಾ ಬಳಗ: ದುನಿಯಾ ವಿಜಯ್, ರಾಜ್ ಬಿ ಶೆಟ್ಟಿ, ರಚಿತಾ ರಾಮ್, ಉಮಾಶ್ರೀ, ರಿತನ್ಯಾ, ಇತರರು
ರೇಟಿಂಗ್: 4/5

ಸಂವಿಧಾನದಲ್ಲಿ ಹೇಳಿರುವ ಸಮಾನತೆಯನ್ನು ಜಾರಿ ತರುವ ನಿಟ್ಟಿನಲ್ಲಿ ಜಮೀನ್ದಾರನ ವಿರುದ್ಧ ಸಾಮಾನ್ಯ ರೈತನೊಬ್ಬ ಹೋರಾಡುವ ಕಥೆ ಇರುವ ಚಿತ್ರ ಈ ವಾರ ತೆರೆಗೆ ಬಂದಿರುವ ಲ್ಯಾಂಡ್ ಲಾರ್ಡ್.

ಇದು ಕೋಲಾರದ ಭಾಗದಲ್ಲಿ 80 -90 ರ ದಶಕದಲ್ಲಿ ನಡೆಯುವ ಕಥೆಯನ್ನು ಹೊಂದಿದೆ. ಹುಲಿದುರ್ಗದಲ್ಲಿ ಜಮೀನ್ದಾರ ಚಿಕ್ಕೆಜಮಾನ ತನ್ನದೇ ಕಾನೂನಿನಲ್ಲಿ ಕೂಲಿಗಳ ಮೇಲೆ ದೌರ್ಜನ್ಯ ಮಾಡುತ್ತಿರುತ್ತಾರೆ. ಕೂಲಿ ಕಾರ್ಮಿಕ ರಾಚಯ್ಯನಿಗೆ ಸ್ವಂತ ಜಮೀನು ಭೂಮಿ ಹೊಂದಿ ವ್ಯವಸಾಯ ಮಾಡಬೇಕು ಎನ್ನುವ ಕನಸು ಇರುತ್ತದೆ. ಆದರೆ ಅದಕ್ಕೆ ಚಿಕ್ಕೆಜಮಾನ ಅವಕಾಶ ಕಲ್ಪಿಸುವುದಿಲ್ಲ. ಕೂಲಿ ಕಾರ್ಮಿಕರು ಸ್ವಂತ ಭೂಮಿ ಹೊಂದಿದರೆ ಜಮೀನ್ದಾರಿಕೆಗೆ ಬೆಲೆ ಇಲ್ಲ ಎನ್ನುವುದು ಅವನ ವಾದ.

ರಾಚಯ್ಯನ ಮಗಳು ಭಾಗ್ಯ ಆ ಊರಿಗೆ ಪೊಲೀಸ್ ಕಾನ್ಸ್ಟೇಬಲ್ ಆಗಿ ಬಂದಾಗ ತಂದೆ ಹಾಗೂ ಮಗಳು ಜಮೀನ್ದಾರಿಕೆಗೆ ಅಂತ್ಯ ಹಾಡಲು ಮುಂದಾಗುತ್ತಾರೆ. ರಾಚಯ್ಯ ಈ ಹಾದಿಯಲ್ಲಿ ನಡೆಸುವ ಹೋರಾಟದ ಬಗ್ಗೆ ತಿಳಿಯಲು ಚಿತ್ರವನ್ನು ನೋಡಬೇಕಿದೆ.

ರಾಚಯ್ಯನ ಪಾತ್ರದಲ್ಲಿ ದುನಿಯಾ ವಿಜಯ್ ಮಿಂಚಿದ್ದಾರೆ. ಜಮೀನ್ದಾರನ ಪಾತ್ರದಲ್ಲಿ ರಾಜ್ ಶೆಟ್ಟಿ ಅದ್ಭುತವಾಗಿ ನಡೆಸಿದ್ದಾರೆ. ಅವರ ಕ್ರೌರ್ಯ, ದರ್ಪದ ನಟನೆ ಗಮನ ಸೆಳೆಯುತ್ತದೆ. ಪೊಲೀಸ್ ಕಾನ್ಸ್ಟೇಬಲ್ ಭಾಗ್ಯ ಪಾತ್ರದಲ್ಲಿ ರಿತನ್ಯಾ ನಟಿಸಿದ್ದಾರೆ.

ಸ್ವಾತಂತ್ರ್ಯ ಬಂದು ಹಲವು ವರ್ಷ ಆದರೂ ಜಮೀನ್ದಾರರು ಯಾವ ರೀತಿ ಜೀತದಾಳುಗಳಂತೆ ಕೂಲಿಕಾರ್ಮಿಕರನ್ನು ಕಾಣುತ್ತಿದ್ದರು ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಕೋಲಾರದ ಭಾಷೆಯನ್ನು ಚಿತ್ರದಲ್ಲಿ ಬಳಸಲಾಗಿದೆ. ದೇವದಾಸಿ ಸೇರಿದಂತೆ ಕೆಲವು ಅನಿಷ್ಟ ಪದ್ದತಿಗಳ ಬಗ್ಗೆ ಚರ್ಚಿಸಲಾಗಿದೆ. ಚಿತ್ರದಲ್ಲಿ ಒಳ್ಳೆಯ ಸಂದೇಶವನ್ನು ನೀಡುವ ಯತ್ನ ಮಾಡಲಾಗಿದೆ.

ಸಮಾನತೆಯ ಸಂದೇಶವನ್ನು ಸಾರುವ ಈ ಚಿತ್ರ ಮಣ್ಣಿನ ಸೊಗಡಿನ ಕಥೆಯಾಗಿ ಗಮನ ಸೆಳೆಯುತ್ತದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!