‘ರಕ್ಕಸಪುರದೊಳ್’ ವಿಶೇಷ ಪಾತ್ರದಲ್ಲಿ ಜನ್ಯ

ರಾಜ್ ಬಿ ಶೆಟ್ಟಿ ಅವರ  ಕ್ರೈಮ್ ಥ್ರಿಲ್ಲರ್ ‘ರಕ್ಕಸಪುರದೊಳ್’ ಚಿತ್ರದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

‘ರಕ್ಕಸಪುರದೊಳ್’ ಚಿತ್ರದ ಹಾಡು ಟ್ರ್ಯಾಕ್ ‘ಸಿದ್ದಯ್ಯ ಸ್ವಾಮಿ ಬನ್ನಿ…..’  ಇಂದು ಸಂಜೆ 5 ಗಂಟೆಗೆ  ಬಿಡುಗಡೆಯಾಗಲಿದೆ. ನಿರ್ದೇಶಕ ಜೋಗಿ ಪ್ರೇಮ್ ಇದನ್ನು ಹಾಡಿದ್ದಾರೆ.  ಅರ್ಜುನ್ ಜನ್ಯ  ಈ ಹಾಡಿನಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ತೆರೆಮರೆಯಲ್ಲಿ ಚಿರಪರಿಚಿತರಾ ಅರ್ಜುನ್ ಜನ್ಯ ಅವರು  ಈ ಹಾಡಿನಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ.

ಗ್ರಾಮಸ್ಥರು ತಮ್ಮ ತೊಂದರೆಗಳ ಪರಿಹಾರಕ್ಕಾಗಿ ಸಿದ್ದಯ್ಯ ಸ್ವಾಮಿಗೆ ಮೊರೆ ಇಡುತ್ತಾರೆ. ಈ ದೃಶ್ಯದಲ್ಲಿ ರಾಜ್ ಬಿ ಶೆಟ್ಟಿ, ಗೌರವ್ ಶೆಟ್ಟಿ ಮತ್ತು ಗ್ರಾಮಸ್ಥರ ದೊಡ್ಡ ಗುಂಪೇ ಕಾಣಿಸಿಕೊಂಡಿದೆ.

ನಿರ್ದೇಶಕ ಪ್ರೇಮ್ ಅವರೊಂದಿಗೆ  ಕೆಲಸ ಮಾಡಿರುವ ರವಿ ಸಾರಂಗ ‘ರಕ್ಕಸಪುರದೊಳ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕೊಳ್ಳೇಗಾಲ ಸುತ್ತಮುತ್ತ ನಡೆಯುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ.

‘ರಕ್ಕಸಪುರದೊಳ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್, ಟೀಸರ್,  ‘ನೀನಾ ನೀನಾ…’ ಹಾಡು ಈಗಾಗಲೇ  ಸಂಚಲನ ಮೂಡಿಸಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!