ಸೂರ್ಯ

Movie Review: ರೌಡಿಸಂ ಕಥೆಯಲ್ಲಿ ಪ್ರೇಮ ಸಾಹಸ..!

ಚಿತ್ರ: ಸೂರ್ಯ
ನಿರ್ದೇಶಕರು: ಸಾಗರ್ ದಾಸ್
ನಿರ್ಮಾಪಕರು: ಬಸವರಾಜ್ ಎಮ್ ಬೆನ್ನಿ ಮತ್ತು ರವಿ ಎಮ್ ಬೆನ್ನಿ
ತಾರಾಗಣ: ಪ್ರಶಾಂತ್ ಸೂರ್ಯ, ಹರ್ಷಿತಾ ಎಮ್.ಕೆ, ಶ್ರುತಿ, ರವಿಶಂಕರ್ ಮುಂತಾದವರು.

ಒಂದು ಕೊಲೆಯ ದೃಶ್ಯದೊಂದಿಗೆ ಚಿತ್ರದ ಆರಂಭದಲ್ಲೇ ಕುತೂಹಲ ಮೂಡಿಸುವ ಸನ್ನಿವೇಶ ಸೃಷ್ಟಿಯಾಗುತ್ತದೆ. ತನ್ನ ಮಗಳೊಂದಿಗೆ ಸಂಬಂಧ ಬೆಳೆಸಲು ಮಾತುಕತೆಗೆ ಬಂದ ರೌಡಿಯನ್ನೇ ಕೊಲೆ ಮಾಡುವ ದೃಶ್ಯದ ಮೂಲಕ‌ ಲೇಔಟ್ ಮಾರಿಯ ಇಂಟ್ರೋ ಆಗುತ್ತದೆ. ಇಂಥ ಮಾರಿಯನ್ನೇ ಎದುರಿಸಿ‌ ನಿಲ್ಲುವ ಸೂರಿಯಾಗಿ ನಾಯಕ ಸೂರ್ಯನ ಇಂಟ್ರೋ ನೀಡಲಾಗಿದೆ. ಅಲ್ಲಿಗೆ ನಾಯಕನಿಗೆ ಸಹಜವಾಗಿ ಒಂದೊಳ್ಳೆಯ ಬಿಲ್ಡಪ್ ದೊರಕಿದೆ.

ಸೂರಿ ಯಾನೇ ಸೂರ್ಯನಾಗಿ ನವನಟ ಪ್ರಶಾಂತ್ ಸೂರ್ಯ ನಟಿಸಿದ್ದಾರೆ. ಪ್ರಶಾಂತ್ ಸೂರ್ಯ ನಟನೆ ನೋಡಿದರೆ ಅನುಭವಿ ಕಲಾವಿದರಂತೆ ಕಾಣುತ್ತಾರೆ. ಇವರ ಪಾತ್ರಕ್ಕೆ ಎರಡು ಶೇಡ್ಸ್ ಇವೆ. ಒಂದು ಕಡೆ ಒಳ್ಳೆಯ ಪಾಗಲ್ ಪ್ರೇಮಿಯಂತೆ ಕಾಣಿಸಿದರೆ ಮತ್ತೊಂದೆಡೆ ಮಚ್ಚು ಹಿಡಿದು ರೌಡಿಯಂತೆ ಹೋರಾಡುತ್ತಾರೆ. ಎರಡೂ ಭಾವಗಳಿಗೂ ನ್ಯಾಯ ಸಲ್ಲಿಸಿದ ಕೀರ್ತಿ ಪ್ರಶಾಂತ್ ಅವರದ್ದಾಗಿದೆ.

ಪೂರ್ತಿ ಚಿತ್ರ ಫ್ಲ್ಯಾಶ್‌‌‌ ಬ್ಯಾಕ್ ಮೂಲಕ ಸಾಗುತ್ತದೆ.‌ ಕೊಲೆ ಮಾಡಿ ಜೈಲು ಸೇರಿದ ನಾಯಕ ಐಜಿಪಿಯಲ್ಲಿ ಇದಕ್ಕೆ ಹಿನ್ನೆಲೆಯಾದ ಕಥೆಯನ್ನು ಹೇಳುತ್ತಾ ಸಾಗುತ್ತಾನೆ.‌ ಇದೇ ಘಟನೆಗಳಲ್ಲಿ ಮಾರಿಯ ಮಗಳೊಂದಿಗಿನ ಪ್ರೀತಿ ಮತ್ತು ವಿರಸದ ಕಥೆ ಅನಾವರಣಗೊಳ್ಳುತ್ತದೆ. ಮತ್ತೊಂದೆಡೆ ಮಮತಾ ಎನ್ನುವ ಮಮತಾಮಯಿಯ ಪರಿಚಯವೂ ಆಗುತ್ತದೆ‌.‌

ಮಾರಿಯ ಪುತ್ರಿ ಭೂಮಿಯಾಗಿ ಹರ್ಷಿತಾ ಎಮ್.‌ಕೆ ನಟಿಸಿದ್ದಾರೆ. ಕಾಲೇಜ್ ಸುಂದರಿಯಾಗಿ, ಪ್ರೇಮ ಕಣ್ಣುಗಳ‌ ಅರಸಿಯಾಗಿ ಮಿಂಚಿದ್ದಾರೆ. ಮಮತಾ ಪಾತ್ರವನ್ನು ಶ್ರುತಿ ನಿಭಾಯಿಸಿದ್ದಾರೆ. ಶ್ರುತಿ ಪಾತ್ರಕ್ಕೂ ಎರಡು ಶೇಡ್ಸ್ ಇವೆ. ಎರಡರಲ್ಲೂ ಸಮರ್ಥವಾಗಿ ಮಿಂಚಿದ್ದಾರೆ. ಮಾರಿಯಾಗಿ ರವಿಶಂಕರ್ ಚಿತ್ರದುದ್ದಕ್ಕೂ ಅಬ್ಬರಿಸಿದ್ದಾರೆ. ಲೇಔಟ್ ಮಾರಿ ಚಿತ್ರದ ಆಕರ್ಷಕ ಪಾತ್ರವೆಂದು ಒಪ್ಪಿಕೊಳ್ಳಲೇಬೇಕು.

ಅನಾಥ ಯುವಕ ಪ್ರೇಮದಲ್ಲಿ ಬೀಳುವುದು ಸಾಮಾನ್ಯ ಅನಿಸಿದರೂ ಕಥೆಯಲ್ಲಿ ಟ್ವಿಸ್ಟ್ ಮೇಲೆ‌ ಟ್ವಿಸ್ಟ್ ಇದೆ. ಅನಾಥನಿಗೂ ರೌಡಿಸಂಗೂ ನಂಟು‌ ಸೃಚ್ಟಿಯಾಗುವ ದೃಶ್ಯವನ್ನು ಅದ್ಭುತವಾಗಿ ಸೆರೆ ಹಿಡಿಯಲಾಗಿದೆ. ಮನುರಾಜ್ ಛಾಯಾಗ್ರಹಣ ಆಕರ್ಷಕವಾಗಿದೆ. ಶ್ರೀ ಶಾಸ್ತ ಸಂಗೀತದಲ್ಲಿನ ಹಾಡುಗಳು ಹೆಜ್ಜೆ ಹಾಕುವಂತಿವೆ. ಆ್ಯಕ್ಷನ್ ಗೆ ಸಿಳ್ಳೆ ಹೊಡೆಯಲೇಬೇಕು.‌

ಪ್ರಮೋದ್ ಶೆಟ್ಟಿ ನಿರ್ವಹಿಸಿರುವ ವಾಂಡ್ ಬಸು ಪಾತ್ರ, ನಾಗಾಭರಣರ ಐಜಿಪಿ ಪಾತ್ರ,‌ ಹೂ ಮಾರಾಟಗಾರ್ತಿ ಪುಷ್ಪ, ಬಲ ರಾಜ್ ವಾಡಿಯವರ ಶಂಕರಣ್ಣನ ಪಾತ್ರಗಳು ಮನಸೆಳೆಯುತ್ತವೆ‌. ಎಲ್ಲ ರೀತಿಯಿಂದಲೂ ಆಕರ್ಷಕವಾಗಿ ಕಾಣಿಸುವ ಈ‌ ಚಿತ್ರ ಪ್ರೇಕ್ಷಕರ ಮನಗೆಲ್ಲುವುದರಲ್ಲಿ ಯಾವ ಸಂದೇಹವೂ ಇಲ್ಲ.

Be the first to comment

Leave a Reply

Your email address will not be published. Required fields are marked *

Translate »
error: Content is protected !!