ಸುದೀಪ್‌ಗೆ ‘ರಣಹದ್ದು’ ಸಂಕಷ್ಟ !

ಬಿಗ್ ಬಾಸ್  ನಿರೂಪಣೆ ವೇಳೆ ರಣಹದ್ದು ಬಗ್ಗೆ ತಪ್ಪಾದ ಮಾಹಿತಿ  ನೀಡಿದ್ದಾರೆ ಎಂದು ಆರೋಪಿಸಿ  ಕಿಚ್ಚ ಸುದೀಪ್ ಹಾಗೂ ಬಿಗ್ ಬಾಸ್ ವಿರುದ್ಧಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ರಾಮನಗರದ ಅರಣ್ಯಾಧಿಕಾರಿಗಳಿಗೆ ದೂರು ನೀಡಿದೆ.

ಬಿಗ್ ಬಾಸ್ 12ರ ಶೋ ವೇಳೆ ವಿವಿಧ ಪ್ರಾಣಿಗಳ ಫೋಟೋವನ್ನು ನೀಡಿ ಸ್ಪರ್ಧಿಗಳ ಮನಸ್ಥಿತಿಯನ್ನು ಬಿಂಬಿಸಿ ಫೋಟೋ ಹಾಕಬೇಕು ಎಂದು ಹೇಳಲಾಗುತ್ತದೆ. ಆಗ ಸ್ಪರ್ಧಿಯೊಬ್ಬರ ಕುತ್ತಿಗೆಗೆ ರಣಹದ್ದು ಫೋಟೋವೊಂದನ್ನ ಹಾಕಿ  ‘ಹೊಂಚುಹಾಕಿ ಸಂಚು ಮಾಡಿ ಕರೆಕ್ಟ್ ಟೈಂ ಲಬಕ್ ಅಂತ ಹಿಡಿಯುವವರು ಯಾರು?’ ಎಂದು ಸುದೀಪ್ ಕೇಳಿದ್ದರು‌. ಈ ಪ್ರಶ್ನೆ  ವಿವಾದಕ್ಕೆ ಕಾರಣವಾಗಿದೆ.

ರಣಹದ್ದು ಸತ್ತ ಪ್ರಾಣಿ ಮಾತ್ರ ತಿಂದು ಪರಿಸರದ ಸಮತೋಲನ ಕಾಪಾಡುವ ಪಕ್ಷಿ. ಇದು ಯಾವುದೇ ಪ್ರಾಣಿಗಳಿಗೆ ಹಾನಿ ಮಾಡುವುದಿಲ್ಲ. ಇಂತಹ ಪಕ್ಷಿ ಬಗ್ಗೆ ಸುದೀಪ್ ಅವರು ತಪ್ಪು ಮಾಹಿತಿ ನೀಡಿರುವುದು ಸರಿಯಲ್ಲ ಎಂದು ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ದೂರು ನೀಡಿದೆ.

ಅಳಿವಿನಂಚಿನಲ್ಲಿರುವ ರಣಹದ್ದು ಬಗ್ಗೆ ತಪ್ಪಾದ ಮಾಹಿತಿ ನೀಡಿರುವ ಬಿಗ್ ಬಾಸ್ ಸಂಸ್ಥೆ ಹಾಗೂ ಸುದೀಪ್ ಅವರಿಗೆ ಸೂಕ್ತ ರೀತಿಯಲ್ಲಿ ತಿಳುವಳಿಕೆ ನೀಡುವಂತೆ ರಾಮನಗರ ಡಿಸಿಎಫ್ ಹಾಗೂ ಆರ್‌ಎಫ್‌ಓ ಮನ್ಸೂರ್‌ ಅವರಿಗೆ ರಣಹದ್ದು ಸಂರಕ್ಷಣಾ ಟ್ರಸ್ಟ್ ಕೇಳಿದೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!