ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಒಂದು ವಾರವಷ್ಟೇ ಬಾಕಿ ಇದ್ದು, ಟಾಸ್ಕ್ ಕ್ವೀನ್ ರಾಶಿಕಾ ಶೆಟ್ಟಿ ಔಟ್ ಆಗಿದ್ದಾರೆ.
ಭಾನುವಾರದ ಎಪಿಸೋಡ್‌ನಲ್ಲಿ ಒಬ್ಬ ಸ್ಪರ್ಧಿ ಮನೆಯಿಂದ ಹೊರಹೋಗಬೇಕೆಂಬ ನಿಯಮದಂತೆ ರಾಶಿಕಾ ಔಟ್ ಆಗಿದ್ದಾರೆ. ಒಟ್ಟು 8 ಮಂದಿ ಸ್ಪರ್ಧಿಗಳ ಪೈಕಿ, 7 ಮಂದಿ ಗಿಲ್ಲಿ ನಟ, ಕಾವ್ಯ ಶೈವ, ಅಶ್ವಿನಿ ಗೌಡ, ಧ್ರುವಂತ್, ರಾಶಿಕಾ ಶೆಟ್ಟಿ, ರಘು, ರಕ್ಷಿತಾ ಶೆಟ್ಟಿ ಡೇಂಜರ್ ಝೋನ್‌ನಲ್ಲಿದ್ದರು.
ಶನಿವಾರದ ಎಪಿಸೋಡ್‌ನಲ್ಲಿ ಅಶ್ವಿನಿ ಗೌಡ ಅವರು ಮೊದಲು ಸೇಫ್ ಆದರು. ಭಾನುವಾರದ ಎಪಿಸೋಡ್‌ನಲ್ಲಿ ಮೊದಲು ಗಿಲ್ಲಿ, ನಂತರ ರಕ್ಷಿತಾ ಶೆಟ್ಟಿ, ಧ್ರುವಂತ್, ಕಾವ್ಯ ಸೇಫ್ ಆದರು. ಕೊನೆಗೆ ರಘು ಹಾಗೂ ರಾಶಿಕಾ ಶೆಟ್ಟಿ ಡೇಂಜರ್ ಝೋನ್‌ನಲ್ಲಿದ್ದರು. ಇವರಿಬ್ಬರ ಪೈಕಿ ರಾಶಿಕಾ ಶೆಟ್ಟಿ ಔಟ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ, ಧನುಷ್, ಗಿಲ್ಲಿ, ಕಾವ್ಯಾ, ಧ್ರುವಂತ್, ರಕ್ಷಿತಾ, ರಘು ಉಳಿದುಕೊಂಡಿದ್ದಾರೆ. ಈ ನಡುವಲ್ಲೇ ಎಲಿಮಿನೇಟ್ ಆಗಿ ಹೊರ ಹೋಗಿದ್ದ ಮಲ್ಲಮ್ಮ ಮತ್ತೆ ರೀ ಎಂಟ್ರಿ ಕೊಟ್ಟಿದ್ದಾರೆ. ಮಿಡ್ ವೀಕ್ ಎಲಿಮಿನೇಷನ್ ಇದ್ದು, ನೈಟ್ ಎಲಿಮಿನೇಷನ್ ಮೂಲಕ ಇಬ್ಬರು ಹೊರ ಹೋಗಲಿದ್ದಾರೆ. ಈ ಹಿನ್ನೆಲೆಯಲ್ಲಿ ವೋಟಿಂಗ್ ಶುರುವಾಗಿದ್ದು, ಯಾರು ಹೊರ ಹೋಗುತ್ತಾರೆಂಬ ಕುತೂಹಲ ಮೂಡಿದೆ.
—–





Be the first to comment